ಬೆಂಗಳೂರು: ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಜೀರೋ ಟ್ರಾಫಿಕ್ ಸೌಲಭ್ಯ ನಿರಾಕರಿಸಿದ್ದಾರೆ. ಗೌರವ, ಸನ್ಮಾನ ರೂಪದಲ್ಲಿ ಹಾರ, ತುರಾಯಿ, ಶಾಲು ಸ್ವೀಕರಿಸದಿರಲು ನಿರ್ಧರಿಸಿದ್ದಾರೆ. ಈ ಮೂಲಕ ಸಿಎಂ ಸರಳತೆ ಮೆರೆದಿದ್ದು, ಅವರ ನಿರ್ಧಾರಕ್ಕೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಗಣ್ಯ ವ್ಯಕ್ತಿಗಳಿಗೆ ಮಹಾನಗರಗಳಲ್ಲಿ ಜೀರೋ ಟ್ರಾಫಿಕ್ ಸೌಲಭ್ಯ ಕಲ್ಪಿಸಲಾಗುತ್ತದೆ. ಸಿಎಂ ಪ್ರಯಾಣಿಸುವ ರಸ್ತೆಯಲ್ಲಿ 15 ರಿಂದ 20 ನಿಮಿಷ ಮೊದಲು ವಾಹನ ಸಂಚಾರ ತಗ್ಗಿಸಲಾಗುತ್ತದೆ. ಐದು ನಿಮಿಷ ಮೊದಲೇ ಸಂಬಂಧಿಸಿದ ರಸ್ತೆಗೆ ಸಾರ್ವಜನಿಕ ವಾಹನಗಳ ಸಂಚಾರ ನಿಷೇಧಿಸಿ ಮುಖ್ಯಮಂತ್ರಿಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಲಿದ್ದು, ಇದನ್ನು ಮನಗಂಡು ಸಿದ್ದರಾಮಯ್ಯ ಜೀರೋ ಟ್ರಾಫಿಕ್ ಬೇಡವೆಂದು ಹೇಳಿದ್ದಾರೆ.
ಅದೇ ರೀತಿ ಹಾರ ತುರಾಯಿ ಬದಲಿಗೆ ಕೊಡುವುದಾದರೆ ಪುಸ್ತಕಗಳನ್ನು ನೀಡುವಂತೆ ಸಿದ್ದರಾಮಯ್ಯ ಮನವಿ ಮಾಡಿದ್ದು, ಅವರ ನಿರ್ಧಾರಕ್ಕೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
https://twitter.com/siddaramaiah/status/1660269354544672769
https://twitter.com/siddaramaiah/status/1660309831750934528