ಕನ್ಯಾ ರಾಶಿಗೆ ಶುಕ್ರನ ಪ್ರವೇಶ; ಈ ರಾಶಿಯವರಿಗಿದೆ ಯಶಸ್ಸು…..!

ರಾಶಿಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಗ್ರಹ, ರಾಶಿ ಬದಲಾವಣೆಯಿಂದ ಕೆಲವರ ಜೀವನದಲ್ಲಿ ಸುಖ ಪ್ರಾಪ್ತಿಯಾದ್ರೆ ಮತ್ತೆ ಕೆಲವರಿಗೆ ಸಂಕಷ್ಟ ಶುರುವಾಗುತ್ತದೆ. ನವೆಂಬರ್‌ ಮೂರರಂದು ಶುಕ್ರನು ಕನ್ಯಾ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಇದು ಅನೇಕ ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಕೆಲ ರಾಶಿಗಳ ಅದೃಷ್ಟ ಬದಲಾಗಲಿದೆ. ಶುಕ್ರನು ಶುಕ್ರವಾರ ಬೆಳಿಗ್ಗೆ ೪ ಗಂಟೆ ೫೮ ನಿಮಿಷಕ್ಕೆ ಕನ್ಯಾ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಶುಕ್ರನನ್ನು ಸುಂದರತೆಯ ಪ್ರತೀಕವೆಂದು ಪರಿಗಣಿಸಲಾಗುತ್ತದೆ. ಶಕ್ತಿ ನೀಡುವ ಗ್ರಹ ಎಂದೂ ನಂಬಲಾಗಿದೆ.

ಶುಕ್ರನು ಕನ್ಯಾ ರಾಶಿಗೆ ಪ್ರವೇಶ ಮಾಡೋದ್ರಿಂದ ಮಿಥುನ ರಾಶಿ ಜನರಿಗೆ ಲಾಭವಾಗಲಿದೆ. ಮಿಥುನ ರಾಶಿಯವರ ಪ್ರೇಮ ಜೀವನ ಮತ್ತಷ್ಟು ಸುಖಕರವಾಗಲಿದೆ. ವ್ಯಾಪಾರ- ವ್ಯವಹಾರದಲ್ಲಿ ವೃದ್ಧಿಯಾಗಲಿದೆ. ಜೀವನದಲ್ಲಿ ಪೂರ್ಣ ಸಂತೃಷ್ಟಿ ಸಿಗುವ ಸಮಯ ಇದಾಗಲಿದೆ.

ಇನ್ನು ಶುಕ್ರನ ರಾಶಿ ಬದಲಾವಣೆಯಿಂದ ಕನ್ಯಾ ರಾಶಿಯವರಿಗೆ ಮಂಗಳವಾಗಲಿದೆ. ವ್ಯಾಪಾರದಲ್ಲಿರುವ ಜನರಿಗೆ ಶುಕ್ತನ ಈ ನಡೆಯಿಂದ ಹೆಚ್ಚು ಲಾಭವಾಗಲಿದೆ. ಆರ್ಥಿಕ ವೃದ್ಧಿಯಾಗಲಿದೆ. ಜೀವನದಲ್ಲಿ ಸಂತೋಷ ಸಿಗಲಿದೆ. ಸಂಗಾತಿ ಜೊತೆ ಜೀವನ  ಪ್ರೀತಿಯಿಂದ ಕೂಡಿರಲಿದೆ.

ಧನು ರಾಶಿಯ ಜನರಿಗೂ ಈ ವಾರ ಶುಭವಾಗಿರಲಿದೆ. ನೌಕರಿಯಲ್ಲಿ ನೆಮ್ಮದಿ ಸಿಗಲಿದೆ. ಧನು ರಾಶಿಯ ವ್ಯಾಪಾರಸ್ಥರ ಜೇಬು ತುಂಬಲಿದೆ. ನಿಂತಿದ್ದ ಕೆಲಸ ಮುಂದುವರೆಯಲಿದೆ. ಅನೇಕ ಕ್ಷೇತ್ರದಿಂದ ಹಣ ಬರಲಿದೆ. ಸಂಗಾತಿ ಜೊತೆ ಸುಂದರ ಸಮಯ ಕಳೆಯುವ ಅವಕಾಶ ಸಿಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read