ತುಲಾ ರಾಶಿಗೆ ನಾಳೆ ಶುಕ್ರನ ಪ್ರವೇಶ : ಈ ರಾಶಿಯವರಿಗೆ ನಷ್ಟ

ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರ ಗೋಚಾರವನ್ನು ವಿಶೇಷವೆಂದು ಪರಿಗಣಿಸಲಾಗಿದೆ. ನವೆಂಬರ್‌ 30ರಂದು ಶುಕ್ರ, ತುಲಾ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಶುಕ್ರನು ರಾತ್ರಿ 12 ಗಂಟೆ 5 ನಿಮಿಷಕ್ಕೆ ತುಲಾ ರಾಶಿಯನ್ನು ಪ್ರವೇಶ ಮಾಡಲಿದ್ದು, ಇದನ್ನು ಬಹಳ ಮಹತ್ವದ್ದೆಂದು ಪರಿಗಣಿಸಲಾಗಿದೆ. ಶುಕ್ರನನ್ನು ಪ್ರೇಮ, ಸೌಂದರ್ಯ, ಸುಖದ ಸಂಕೇತವೆಂದು ಭಾವಿಸಲಾಗಿದೆ. ಯಾರ ಜಾತಕದಲ್ಲಿ ಶುಕ್ರ ಬಲವಾಗಿದ್ದಾನೋ ಅಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆಂದು ನಂಬಲಾಗಿದೆ.

ಶುಕ್ರ ತುಲಾ ರಾಶಿಯನ್ನು ಪ್ರವೇಶ ಮಾಡುವುದು ಕೆಲ ರಾಶಿಯವರಿಗೆ ಕಷ್ಟ ನೀಡಲಿದೆ.

ಮಿಥುನ : ಮಿಥುನ ರಾಶಿಯವರು ಈ ಸಂದರ್ಭದಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಕೆಲಸದ ಕ್ಷೇತ್ರದಲ್ಲಿ ಹಾನಿ, ವ್ಯಾಪಾರದಲ್ಲಿ ನಷ್ಟ, ಆರ್ಥಿಕ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಯಾವುದೇ ಕೆಲಸದಲ್ಲಿ ಹೂಡಿಕೆ ಮಾಡದಿರುವುದು ಒಳ್ಳೆಯದು. ಆರೋಗ್ಯದ ಬಗ್ಗೆಯೂ ಇವರು ವಿಶೇಷ ಕಾಳಜಿ ವಹಿಸಬೇಕು.

ಸಿಂಹ : ಶುಕ್ರ ತುಲಾ ರಾಶಿಗೆ ಪ್ರವೇಶ ಮಾಡುವುದರಿಂದ ಸಿಂಹ ರಾಶಿಯವರು ನಷ್ಟ ಎದುರಿಸಲಿದ್ದಾರೆ. ಬ್ಯುಸಿನೆಸ್‌ ನಲ್ಲಿ ಹಾನಿಯಾಗುವ ಸಾಧ್ಯತೆಯಿದ್ದು, ಈ ರಾಶಿಯ ಜನರು ತಮ್ಮ ಮಾತು ಮತ್ತು ಖರ್ಚಿನ ಮೇಲೆ ಹಿಡಿತ ಸಾಧಿಸಬೇಕು.

ವೃಶ್ಚಿಕ : ದಾಂಪತ್ಯ ಜೀವನದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ದೂರದ ಪ್ರವಾಸ ರದ್ದಾಗುವ ಸಂಭವವಿದೆ. ಸಾಲ ಕೊಡುವ ಹಾಗೂ ತೆಗೆದುಕೊಳ್ಳುವ ಕಾರ್ಯಕ್ಕೆ ಕೈ ಹಾಕಬೇಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read