BREAKING: ಭರ್ಜರಿ ಶತಕದೊಂದಿಗೆ ವಿರಾಟ್ ಕೊಹ್ಲಿ ದಾಖಲೆ ಹಿಂದಿಕ್ಕಿದ ಶುಭಮನ್ ಗಿಲ್

ಅಹಮದಾಬಾದ್‌ ನಲ್ಲಿ ನಡೆದ ಭಾರತ-ನ್ಯೂಜಿಲೆಂಡ್ ಪಂದ್ಯದ ವೇಳೆ ಟಿ20 ಗರಿಷ್ಠ ವೈಯಕ್ತಿಕ ಸ್ಕೋರರ್ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಶುಭಮನ್ ಗಿಲ್ ಹಿಂದಿಕ್ಕಿದ್ದಾರೆ.

ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಶುಭಮನ್ ಗಿಲ್ ತಮ್ಮ ಉತ್ತಮ ಪ್ರದರ್ಶನ ಮುಂದುವರೆಸಿದ್ದು, ಬುಧವಾರ ಅಹಮದಾಬಾದ್‌ ನಲ್ಲಿ ನಡೆದ ಮೂರನೇ ಮತ್ತು ಅಂತಿಮ ಟಿ20ನಲ್ಲಿ ತಮ್ಮ ಚೊಚ್ಚಲ ಟಿ20 ಶತಕ ಗಳಿಸಿದ್ದಾರೆ. 63 ಎಸೆತಗಳಲ್ಲಿ ಅಜೇಯ 126 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.

ಗಿಲ್ ವಿರಾಟ್ ಕೊಹ್ಲಿಯ T20I ಗಳಲ್ಲಿ ಭಾರತೀಯರ ಗರಿಷ್ಠ ವೈಯಕ್ತಿಕ ಸ್ಕೋರ್‌ನ ದಾಖಲೆಯನ್ನು ಮುರಿದರು. ಏಷ್ಯಾ ಕಪ್ 2022 ರಲ್ಲಿ ಅಫ್ಘಾನಿಸ್ತಾನದ ವಿರುದ್ಧ ಕೊಹ್ಲಿ 121* ರನ್ ಗಳಿಸಿದರು. ಗಿಲ್ ಅವರ ಸ್ಕೋರ್ ಭರ್ಜರಿ 7 ಸಿಕ್ಸರ್‌ಗಳು ಮತ್ತು 12 ಬೌಂಡರಿಗಳಿಂದ ಕೂಡಿತ್ತು. ಗಿಲ್ ಕೆಟ್ಟ ಹೊಡೆತಕ್ಕೆ ಕೈಹಾಕದೇ ಉತ್ತಮ ಪ್ರದರ್ಶನ ನೀಡಿದ್ದು, ಅವರ ಆಟದ ನೆರವಿನಿಂದ ಭಾರತ 20 ಓವರ್‌ ಗಳಲ್ಲಿ ನಾಲ್ಕು ವಿಕೆಟ್‌ಗೆ 234 ರನ್ ಗಳಿಸಿತು.

ಅವರ ಮೊದಲ ಅರ್ಧಶತಕವು 35 ಎಸೆತಗಳಲ್ಲಿ ಮತ್ತು ಮುಂದಿನದು ಕೇವಲ 19 ಎಸೆತಗಳಲ್ಲಿ ಬಂದಿತು. ದೀರ್ಘ ಕಾಲ ನಪಿಡುವಂತಹ ಆಟವಾಡಿದ್ದಾರೆ.

https://twitter.com/BCCI/status/1620801520345432064

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read