ಏಕದಿನ ಕ್ರಿಕೆಟ್ ನಲ್ಲಿ ಹೊಸ ದಾಖಲೆ ಬರೆದ ಶುಭ್​ಮನ್ ಗಿಲ್

ಇಂದು ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲನೆ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಸಾಕಷ್ಟು ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ  ಶುಭ್​ಮನ್ ಗಿಲ್ ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.

ಈಗಾಗಲೇ ಭರ್ಜರಿ ಶತಕ ಸಿಡಿಸಿರುವ ಶುಭ್​ಮನ್ ಗಿಲ್  ಕೇವಲ 19 ಏಕದಿನ ಪಂದ್ಯದಲ್ಲಿ ಸಾವಿರ ರನ್ ಪೂರೈಸುವ ಮೂಲಕ ಅತಿ ವೇಗವಾಗಿ ಸಾವಿರ ರನ್ ಪೂರೈಸಿರುವ ಭಾರತದ ಮೊದಲನೇ ಆಟಗಾರರಾಗಿದ್ದಾರೆ.

ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ 24 ಪಂದ್ಯಗಳಲ್ಲಿ ಸಾವಿರ ರನ್ ಪೂರೈಸಿದ್ದರು. ಈ ದಾಖಲೆಯನ್ನು ಇಂದು ಶುಭ್​ಮನ್ ಗಿಲ್ ಹಿಂದಿಕ್ಕಿದ್ದಾರೆ. ಮತ್ತೊಂದೆಡೆ ಏಕದಿನ ಕ್ರಿಕೆಟ್ ನಲ್ಲಿ ಇಂದು  ತಮ್ಮ ಮೂರನೇ ಶತಕ ಸಿಡಿಸಿದ್ದಾರೆ.

https://twitter.com/ABCricinfo16/status/1615676443618578434?t=LqYNsUbQw-2f-uVNQt3Ppw&s=08

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read