ಮಹಿಳೆಯರು ವ್ಯಾನಿಟಿ ಬ್ಯಾಗ್ ನಲ್ಲಿ ತ್ರಿಶೂಲ ಇಟ್ಟುಕೊಂಡಿರಬೇಕು: ಯಾರಾದ್ರೂ ಚುಡಾಯಿಸಿದ್ರೆ ಚುಚ್ಚಿಬಿಡಬೇಕು: ಮುತಾಲಿಕ್ ಕಿವಿಮಾತು

ಹುಬ್ಬಳ್ಳಿ: ಮಹಿಳೆಯರು ವ್ಯಾನಿಟಿ ಬ್ಯಾಗ್ ನಲ್ಲಿ ತ್ರಿಶೂಲ ಇಟ್ಟುಕೊಂಡಿರಬೇಕು. ಯಾರಾದ್ರೂ ಚುಡಾಯಿಸಿದರೆ ಚುಚ್ಚಿಬಿಡಬೇಕು ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.

ಹುಬ್ಬಳ್ಳಿಯ ಶಿವಕೃಷ್ಣ ಮಂದಿರದಲ್ಲಿ ಶ್ರೀರಾಮಸೇನೆ ವತಿಯಿಂದ ಹಿಂದೂ ಮಹಿಳೆಯರಿಗೆ ತ್ರಿಶೂಲ ದೀಕ್ಷೆ ಕಾಅರ್ಯಕ್ರಮದಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಕಾರ್ಯಕ್ರಮಕ್ಕೆ ಬಂದ ಪ್ರತಿಯೊಬ್ಬ ಮಹಿಳೆಯರಿಗೂ ತ್ರಿಶೂಲ ಹಂಚಲಾಗಿದೆ. ಆಯುಧ ಪೂಜೆ ದಿನ ಮನೆಯಲ್ಲಿ ತಲವಾರ್ ಪೂಜೆ ಮಾಡಬೇಕು. ಆದರೆ ಇಂದು ನಾವು ಪುಸ್ತಕ, ಪೆನ್ನು ಪೂಜೆ ಮಾಡುತ್ತಿದ್ದೇವೆ. ದುರ್ಗಾಮಾತೆಯಲ್ಲಿ ಕೈಯಲ್ಲಿ ಹತ್ತು ಶಸ್ತ್ರಗಳಿವೆ. ಶಿವನ ಕೈಯಲ್ಲಿ ತ್ರಿಶೂಲವಿದೆ. ಅದನ್ನೇ ಮಹಿಳೆಯರ ಕೈಗೆ ಕೊಟ್ಟಿದ್ದೇವೆ ಎಂದರು.

ಮಹಿಳೆಯರು ಇನ್ಮುಂದೆ ವ್ಯಾನಿಟಿ ಬ್ಯಾಗ್ ನಲ್ಲಿ ತ್ರಿಶೂಲ ಇಟ್ಟುಕೊಂಡಿರಬೇಕು. ಯಾರಾದರೂ ಚುಡಾಯಿಸಿದರೆ, ಅತ್ಯಾಚಾರ ಯತ್ನ ನಡೆಸಿದರೆ ಚುಚ್ಚಿಬಿಡಬೇಕು ಎಂದು ಹೇಳಿದರು.

ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಹತ್ಯೆಯಾಗಿ ಒಂದುವರ್ಷ ಕಳೆದರೂ ನ್ಯಾಯ ಸಿಕ್ಕಿಲ್ಲ. ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು. ಆರೋಪಿಗೆ ಜಾಮೀನು ನೀಡಿದರೆ ನಾವೇ ಅವನನ್ನು ಕಲ್ಲುಹೊಡೆದು ಸಾಯಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಹಿಂದೂ ದಂಪತಿಗಳು ಮೂರು, ನಾಲ್ಕು ಡಜನ್ ಮಕ್ಕಳಿಗೆ ಜನ್ಮನೀಡಿ. ಮೂರನೇ ಮಗುವಿನ ಶಿಕ್ಷಣ, ಆರೋಗ್ಯ ಜವಾಬ್ದಾರಿ ಶ್ರೀರಾಮಸೇನೆ ಹೊತ್ತುಕೊಳ್ಳುತ್ತೆ. ನಿಮಗೆ ಸಾಕಲು ಆಗದಿದ್ದರೆ ನಾವು ಸಾಕುತ್ತೇವೆ ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read