ಭೂಮಿ, ಅಗ್ನಿ, ಗಾಳಿ, ಆಕಾಶ, ನೀರಿನಿಂದ ಅಪಾಯ: ಹೆಚ್ಚಿನ ಅನಾಹುತದ ಬಗ್ಗೆ ಕೋಡಿಮಠ ಶ್ರೀ ಶಾಕಿಂಗ್ ಭವಿಷ್ಯ

ಹಾಸನ: ಅರಸೀಕೆರೆ ಶ್ರೀ ಕ್ಷೇತ್ರ ಹಾರನಹಳ್ಳಿ ಕೋಡಿಮಠದ ಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾ ಸ್ವಾಮೀಜಿ ಆಘಾತಕಾರಿ ಭವಿಷ್ಯ ನುಡಿದಿದ್ದಾರೆ. ಭೂಮಿ, ಅಗ್ನಿ, ವಾಯು, ಆಕಾಶ, ನೀರು ಸೇರಿದಂತೆ ಎಲ್ಲೆಡೆಯಿಂದ ತೊಂದರೆ ಇದ್ದು, ಹೆಚ್ಚಿನ ಅನಾಹುತವಾಗಲಿದೆ ಎಂದು ಹೇಳಿದ್ದಾರೆ.

ಈ ಹಿಂದೆ ಜನ ಇದ್ದಕ್ಕಿದ್ದಂತೆ ಸಾಯುತ್ತಾರೆ. ಭೂಮಿ ಬಿರುಕು ಬಿಡುತ್ತದೆ. ಗುಡ್ಡ ಜಾರಿ ಹೋಗುತ್ತದೆ. ಪ್ರವಾಹದಲ್ಲಿ ಜಗತ್ತಿನಾದ್ಯಂತ ಅನೇಕ ಪ್ರದೇಶ ಮುಳುಗುತ್ತವೆ ಎಂದು ಹೇಳಿದ್ದೆ. ರಾಜ್ಯದಲ್ಲಿ ಮಳೆಯಿಂದ ಅವಘಡ ಸಂಭವಿಸುತ್ತವೆ ಎಂದು ಹೇಳಿದ್ದ ಅನೇಕ ಕಡೆಗಳಲ್ಲಿ ಅವು ಘಟಿಸಿವೆ ಎಂದು ಹೇಳುವ ಮೂಲಕ ತಾವು ಹೇಳಿದ ಭವಿಷ್ಯ ನಿಜವಾಗಿದೆ ಎಂದು ತಿಳಿಸಿದ್ದಾರೆ.

ಇನ್ನೂ ಮಳೆ ಇದೆ. ಹೆಚ್ಚಿನ ಅನಾಹುತ ಸಂಭವಿಸುತ್ತದೆ. ಆಕಾಶ ತತ್ವದ ಪ್ರಕಾರ ತೊಂದರೆ ಆಗಬಹುದು. ರಾಜನ ಮೇಲೆ ಭಂಗ ಬೀರಲಿದೆ. ಮಹಾಭಾರತದಲ್ಲಿ ಕೃಷ್ಣ ಇದ್ದ. ಗದಾಯುದ್ಧದಲ್ಲಿ ಭೀಮ ಗೆದ್ದ. ಈಗ ಕೃಷ್ಣ ಇಲ್ಲದೆ ದುರ್ಯೋಧನ ಗೆಲ್ಲುತ್ತಾನೆ ಎಂದು ಹೇಳಿದ್ದೇನೆ. ಅದರ ಅರ್ಥವನ್ನು ಆಮೇಲೆ ಹೇಳುತ್ತೇನೆ ಎಂದು ಹೇಳುವ ಮೂಲಕ ರಾಜಕೀಯವಾಗಿ ನಾಯಕರಿಗೆ ಏಳು ಬೀಳು ಮುನ್ನಡೆ ಭವಿಷ್ಯವನ್ನು ಮಹಾಭಾರತದ ಪ್ರಸಂಗಕ್ಕೆ ಹೋಲಿಕೆ ಮಾಡಿ ಭವಿಷ್ಯ ನುಡಿದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read