ಬೆಂಗಳೂರು: ಸಿಎಂ ಕುರ್ಚಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವಿನ ಕದನವನ್ನು ಮಾಜಿ ಸಚಿವ ಶ್ರೀರಾಮುಲು ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧಕ್ಕೆ ಹೋಲಿಕೆ ಮಾಡಿ ವ್ಯಂಗ್ಯವಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ಸಿಎಂ ಹಾಗೂ ಡಿಸಿಎಂ ನಡುವೆ ಕುರ್ಚಿಗಾಗಿ ಪೈಪೋಟಿ ಜೋರಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿ ಕದನ ವಿರಾಮ ಘೋಷಿಸುತ್ತಾರೆ. ಆದರೆ ಯಾವಾಗ ಯಾರ ಮೇಲೆ ಮತ್ತೆ ಬಾಂಬ್ ಹಾಕಿಕೊಳ್ತಾರೆ ಗೊತ್ತಿಲ್ಲ. ರಷ್ಯಾ ಹಾಗೂ ಉಕ್ರೇನ್ ಆಗಾಗ ಕದನ ವಿರಾಮ ಘೋಷಿಸಿಕೊಳ್ಳುತ್ತವೆ. ಮೂರು ತಿಂಗಳ ಬಳಿಕ ಒಬ್ಬರ ಮೇಲೊಬ್ಬರು ಬಾಂಬ್ ಹಾಕಿಕೊಂಡು ಮತ್ತೆ ಯುದ್ಧ ಮಾಡ್ತಾರೆ. ಅಲ್ಲಿ ಯಾವತ್ತೂ ಕದನ ವಿರಾಮವೇ ಇಲ್ಲ ಕದನ ಮುಂದುವರೆದೇ ಇರುತ್ತದೆ. ಹಾಗೇ ಸಿದ್ದರಾಮಯ್ಯ-ಡಿಕೆಶಿ ನಡುವಿನ ಕುರ್ಚಿ ಕದನ ಕೂಡ ಎಂದಿದ್ದಾರೆ.
ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿ ಕದನ ವಿರಾಮ ಎಂಬ ರೀತಿ ಹೇಳುತ್ತಾರೆ. ಆದರೆ ಯಾವಗ ಯಾರ ಮೇಲೆ ಬಾಂಬ್ ಬೀಳುತ್ತೆ ಗೊತ್ತಿಲ್ಲ. ಸಿದ್ದು ಡಿ.ಕೆ ಮೇಲೆ, ಡಿ.ಕೆ, ಸಿದ್ದು ಮೇಲೆ ಬಾಂಬ್ ಹಾಕ್ತಾರೆ. ಶಾಸಕರು ಯಾವಗ ಯಾರ ಪರ ಇರ್ತಾರೆ ಎಂಬುದು ಗೊತ್ತಾಗಲ್ಲ. ಇವರ ನಡುವೆ ಯಾವತ್ತೂ ಕದನ ವಿರಾಮ ಎಂಬುದು ಘೋಷಣೆಯಾಗಲ್ಲ ಎಂದು ಟೀಕಿಸಿದ್ದಾರೆ.
