ಪೋಷಕರೇ ನಿಮ್ಮ ಮಕ್ಕಳನ್ನುʻಆದರ್ಶ ವಿದ್ಯಾಲಯʼಕ್ಕೆ ಸೇರಿಸಬೇಕಾ? ಇಲ್ಲಿದೆ ಮಾಹಿತಿ

ಧಾರವಾಡ : 2024-25 ನೇ ಸಾಲಿನಲ್ಲಿ  ಆದರ್ಶ ವಿದ್ಯಾಲಯ ಶಾಲೆಯಲ್ಲಿ 6 ನೇ ತರಗತಿಗಳಿಗೆ ಪ್ರವೇಶಕ್ಕಾಗಿ ಆನ್ ಲೈನ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. 

ಪ್ರಸ್ತುತ 5ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಪಾಲಕರು ಹಾಗೂ ತಾಲ್ಲೂಕಿನ ಎಲ್ಲ ಪ್ರಾಥಮಿಕ ಶಾಲೆಗಳ ಮುಖ್ಯೋಪಾಧ್ಯಾಯರು ಇಲಾಖೆಯ ವೆಬ್‌ಸೈಟ್:  www.schooleducation.kar.nic.in     ಮತ್ತು   vidyavahini.karnataka.gov.in     ಮೂಲಕ ಫೆಬ್ರವರಿ 06 ರೊಳಗೆ ಆನ್‌ಲೈನ್ ಅರ್ಜಿ ಸಲ್ಲಿಸಬೇಕು.

ಅಗತ್ಯ ದಾಖಲೆಗಳು

ಅರ್ಜಿ ಸಲ್ಲಿಸಲು ಪ್ರಸ್ತುತ 5ನೇ ತರಗತಿ ಓದುತ್ತಿರುವ ವಿದ್ಯಾರ್ಥಿಯ ಸ್ಯಾಟ್ಸ್ ನಂಬರ್, ಇತ್ತೀಚಿನ ಭಾವ ಚಿತ್ರ, ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಪ್ರತಿ, ಪೋಷಕರ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಗಳನ್ನು ಒದಗಿಸಬೇಕು. ಬೇರೆ ತಾಲ್ಲೂಕು/ಜಿಲ್ಲೆ/ರಾಜ್ಯಗಳ ಮಕ್ಕಳು ಕಡ್ಡಾಯವಾಗಿ  ವ್ಯಾಸಂಗ ಪ್ರಮಾಣ ಪತ್ರವನ್ನು ಅರ್ಜಿಯೊಂದಿಗೆ ಅಪ್‌ಲೋಡ್ ಮಾಡಬೇಕು.(ಪಾಲಕರು ಕೊಪ್ಪಳ ತಾಲ್ಲೂಕಿನಲ್ಲಿ ವಾಸವಿರಬೇಕು.) ಆಯ್ಕೆಯಾದ ಪಕ್ಷದಲ್ಲಿ ಸಕ್ಷಮ ಪ್ರಾಧಿಕಾರದಿಂದ ದಾಖಲಾತಿ ಪಡೆಯುವ ಸಂದರ್ಭದಲ್ಲಿ ವಾಸಸ್ಥಳ ಪ್ರಮಾಣ ಪತ್ರ ಹಾಜರುಪಡಿಸಬೇಕು. ಅಂಗವಿಕಲ ವಿದ್ಯಾರ್ಥಿಗಳಿಗೆ ಸಕ್ಷಮ ಪ್ರಾಧಿಕಾರದಿಂದ ನೀಡಿರುವ ಪ್ರಮಾಣ ಪತ್ರ ಸಲ್ಲಿಸಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read