ತುಮಕೂರು : ತುಮಕೂರಿನ ನಾದಚಿಲುಮೆಯಲ್ಲಿ ಅನುಮತಿ ಇಲ್ಲದೇ ಚಿತ್ರೀಕರಣ ಮಾಡಿದ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ರಕ್ಷಿತಾ ಪ್ರೇಮ್ ಸಹೋದರನ ಸಿನಿಮಾದ ಶೂಟಿಂಗ್ ನಿಲ್ಲಿಸಿದ್ದಾರೆ.
ಇನ್ನೂ ಹೆಸರಿಡದ ಸಿನಿಮಾದ ಶೂಟಿಂಗ್ ಕಳೆದ ಐದು ದಿನಗಳಿಂದ ನಾದಚಿಲುಮೆಯಲ್ಲಿ ನಡೆಯುತ್ತಿದೆ. ನಟಿ ರಕ್ಷಿತಾ ಪ್ರೇಮ್ ಸಹೋದರ ರಾಣಾ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ದಾಳಿ ನಡೆಸಿ ಚಿತ್ರತಂಡದವರನ್ನು ವಿಚಾರಣೆ ನಡೆಸಿ ಸಿನಿಮಾದ ಶೂಟಿಂಗ್ ನಿಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ನಾವು ಊಟಕ್ಕೆ ಮಾತ್ರ ನಿಲ್ಲಿಸಿದ್ದೆವು, ಸಿನಿಮಾದ ಶೂಟಿಂಗ್ ಮಾಡಿಲ್ಲ ಎಂದು ಚಿತ್ರತಂಡ ಸ್ಪಷ್ಟನೆ ನೀಡಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.