ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ವಿವಾದಾತ್ಮಕ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರ ಮೇಲೆ ಯುವಕನೊಬ್ಬ ಇಂದು ಚಪ್ಪಲಿ ಎಸೆದಿದ್ದಾನೆ. ಸಮಾಜವಾದಿ ಪಕ್ಷದ ಹಿಂದುಳಿದ ವರ್ಗಗಳ ಸಭೆಯನ್ನು ಲಕ್ನೋದಲ್ಲಿ ಏರ್ಪಡಿಸಿದ್ದ ವೇಳೆ ಈ ಘಟನೆ ನಡೆದಿದೆ.
ಸಭೆ ನಡೆಯುತ್ತಿದ್ದಾಗ ವಕೀಲನ ವೇಷ ಧರಿಸಿ ಬಂದಿದ್ದ ಈ ಯುವಕ ಏಕಾಏಕಿ ಚಪ್ಪಲಿ ಎಸೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ನಡೆಯುತ್ತಿದ್ದಂತೆ ಆಕ್ರೋಶಗೊಂಡ ಸಮಾಜವಾದಿ ಪಕ್ಷದ ಕಾರ್ಯಕರ್ತರು ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಈ ಯುವಕ ಯಾವ ಕಾರಣಕ್ಕೆ ಸ್ವಾಮಿ ಪ್ರಸಾದ್ ಮೌರ್ಯ ಅವರ ಮೇಲೆ ಚಪ್ಪಲಿ ಎಸೆದಿದ್ದಾನೆ ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಕೃತ್ಯ ಎಸಗುತ್ತಿದ್ದಂತೆ ಆತ ಮಾಧ್ಯಮ ಪ್ರತಿನಿಧಿಗಳ ಬಳಿ ಮಾತನಾಡಲು ಯತ್ನಿಸಿದ್ದು, ಆದರೆ ಆತನನ್ನು ಹಿಡಿದು ಥಳಿಸಿದ ಸಮಾಜವಾದಿ ಪಕ್ಷದ ಕಾರ್ಯಕರ್ತರು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
https://twitter.com/PTI_News/status/1693520487949705461?ref_src=twsrc%5Etfw%7Ctwcamp%5Etweetembed%7Ctwterm%5E1693520487949705461%7Ctwgr%5E414389f93bfeaed40a4ee3a008db72f6669eef7d%7Ctwcon%5Es1_&ref_url=https%3A%2F%2Fhindi.news24online.com%2Fstate%2Fup-uk%2Fshoe-thrown-at-swami-prasad-maurya-in-lucknow-man-reached-in-guise-of-lawyer-video%2F312631%2F