ದುನಿಯಾ ಡಿಜಿಟಲ್ ಡೆಸ್ಕ್ : ಭಾರತದಲ್ಲಿ ಮದುವೆ ದಿನ ನಡೆಯುವ ಹಲವು ರೀತಿಯ ಆಚರಣೆಗಳು/ಸಂಪ್ರದಾಯಗಳು ಇಂದಿಗೂ ಜಾರಿಯಲ್ಲಿದೆ. ಆದರೆ ಈ ಆಚರಣೆ ನಿಮಗೆ ಸ್ವಲ್ಪ ಕಸಿವಿಸಿಯಾಗಬಹುದು. ಆದರೆ ಇದು ಸತ್ಯ.
ಹೌದು, ಮದುವೆ ದಿನ ತಾಯಿ ತನ್ನ ಮಗನಿಗೆ ( ಮಧುಮಗನಿಗೆ ) ಎಲ್ಲರ ಎದುರು ಎದೆಹಾಲು ಉಣಿಸುತ್ತಾಳೆ.
ಗುಜರಾತ್ ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ತಾಯಿ ತನ್ನ ಮಗನಿಗೆ ಹಾಲುಣಿಸುವುದನ್ನು ತೋರಿಸಿದ ವೀಡಿಯೋ ಆನ್ಲೈನ್ನಲ್ಲಿ ಬಿಸಿ ಚರ್ಚೆಗೆ ಕಾರಣವಾಗಿದೆ.
ಈ ದೃಶ್ಯದಲ್ಲಿ ಸಾಂಪ್ರದಾಯಿಕ ಭಾರತೀಯ ವಿವಾಹ ಉಡುಪನ್ನು ಧರಿಸಿರುವ ವರನ ಸುತ್ತಲೂ ಅವನ ತಾಯಿ ಸೇರಿದಂತೆ ಹಲವಾರು ಮಹಿಳೆಯರು ಇದ್ದಾರೆ. ತಾಯಿ ತನ್ನ ಸೆರಗನ್ನ ಜಾರಿಸಿ ಮದು ಮಗನಿಗೆ ಎದೆಹಾಲು ಉಣಿಸುತ್ತಾಳೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ, ಟೀಕೆಗೆ ಕಾರಣವಾಗಿದೆ. ಈ ಆಚರಣೆ ಭಾರತದ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಆಚರಿಸಲ್ಪಡುವ ಸಂಪ್ರದಾಯವಾಗಿದೆ ಎಂದು ಹೇಳಲಾಗುತ್ತದೆ, ಇದು ಆಶೀರ್ವಾದ, ಸಂಪರ್ಕ ಅಥವಾ ಸಾಂಸ್ಕೃತಿಕ ನಿರಂತರತೆಯನ್ನು ಸಂಕೇತಿಸುತ್ತದೆ ಎಂದು ಹೇಳಲಾಗುತ್ತದೆ. ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಲೇ ಇದೆ.
ಸಂಪ್ರದಾಯದ ಹಿಂದಿದೆ ಈ ಉದ್ದೇಶ
ಗಂಡುಮಕ್ಕಳು ಮದುವೆಯಾದ ಬಳಿಕ ಹೆಂಡತಿ ಬಂದ ಬಳಿಕ ತಾಯಿಯಿಂದ ಅಂತರ ಕಾಯ್ದುಕೊಳ್ಳುತ್ತಾರೆ. ಮದುವೆಯ ದಿನ ತಾಯಿ ತನ್ನ ಮಗನಿಗೆ ಎದೆಹಾಲು ಉಣಿಸಿದರೆ ಮಗ ಹಾಗೂ ತಾಯಿ ಬಾಂಧವ್ಯ ಜೀವನಪೂರ್ತಿ ಬಹಳ ಚೆನ್ನಾಗಿರುತ್ತದೆ ಎಂಬ ನಂಬಿಕೆಯಿದೆ. ಮಗನ ಜೀವನದಲ್ಲಿ ಎಂತಹ ಹೆಣ್ಣೇ ಬಂದರೂ ತಾಯಿ ಸ್ಥಾನ ಅಚ್ಚಳಿಯದೇ ಉಳಿಯುತ್ತದೆ ಎಂಬ ಸಂದೇಶವನ್ನ ಈ ಆಚರಣೆಯ ಮೂಲಕ ನೀಡಲಾಗುತ್ತದೆ.
