ದೆಹಲಿಯಲ್ಲಿ ಯುವತಿಯೊಬ್ಬಳ ಸ್ಕೂಟಿಗೆ ಕಾರಿನಿಂದ ಡಿಕ್ಕಿ ಹೊಡೆದು ಆಕೆಯನ್ನು 12 ಕಿಲೋಮೀಟರ್ ದೂರ ಎಳೆದುಕೊಂಡು ಹೋದ ಘಟನೆ ಇನ್ನೂ ಹಸಿರಾಗಿರುವಾಗಲೇ ಮತ್ತೊಂದು ಶಾಕಿಂಗ್ ಕೃತ್ಯ ಗುರುಗ್ರಾಮದಲ್ಲಿ ನಡೆದಿದೆ.
ಮಧ್ಯ ವಯಸ್ಕ ಮಹಿಳೆ ತನ್ನ ಬೈಕ್ ಏರಲು ನಿರಾಕರಿಸಿದರು ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಆಕೆಗೆ ಹೆಲ್ಮೆಟ್ ನಿಂದ ಹಿಗ್ಗಾಮುಗ್ಗಾ ಥಳಿಸಿದ್ದು, ಈ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಈ ಕೃತ್ಯ ಎಸಗಿದ ವ್ಯಕ್ತಿಯನ್ನು ಕಮಲ್ ಎಂದು ಗುರುತಿಸಲಾಗಿದ್ದು, ಈತ ಬೈಕಿನಲ್ಲಿ ಬರುವಾಗ ದಾರಿಯಲ್ಲಿ ಸಿಕ್ಕ ತನ್ನ ನೆರೆಮನೆಯ ಮಹಿಳೆಯನ್ನು ಹಿಂದೆ ಕೂರುವಂತೆ ಹೇಳಿದ್ದಾನೆ.
ಇದಕ್ಕೆ ಆಕೆ ನಿರಾಕರಿಸಿದ ವೇಳೆ ಕೈಯಲ್ಲಿದ್ದ ಹೆಲ್ಮೆಟ್ ನಿಂದ ಥಳಿಸಿದ್ದಾನೆ. ಈ ಸಂದರ್ಭದಲ್ಲಿ ಕೆಲವರು ಮಧ್ಯಪ್ರವೇಶಿಸಿದ್ದು, ತೀವ್ರವಾಗಿ ಗಾಯಗೊಂಡಿರುವ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ.
#WATCH | Haryana: CCTV footage of a man named Kamal hitting a woman with his helmet after she refused to ride on his bike. pic.twitter.com/Az3MWRKKWo
— ANI (@ANI) January 6, 2023
A man named Kamal beat up a woman living in the neighbourhood with helmet after she refused to ride with him on his bike. Woman was severely injured &was rushed to a hospital, FIR has been filed under various sections of IPC. The probe is underway: ACP Manoj K, Gurugram pic.twitter.com/INfyNdknea
— ANI (@ANI) January 6, 2023