ಆಡಲು ನಿರಾಕರಿಸಿದ್ದಕ್ಕೆ ಬೆನ್ನಟ್ಟಿದ ಕೋಚ್;‌ ಓಡಿ ಬಚಾವಾದ ಅಥ್ಲೀಟ್‌ | Video

ಬಿಹಾರದ ಮಾದೇಪುರದಲ್ಲಿ ವಿಲಕ್ಷಣ ಪ್ರಕರಣವೊಂದು ನಡೆದಿದ್ದು, ಬ್ಯಾಡ್ಮಿಂಟನ್‌ ಆಟಗಾರನೊಬ್ಬ ಆಡಲು ನಿರಾಕರಿಸಿದ ಎಂಬ ಕ್ಷುಲ್ಲಕ ಕಾರಣಕ್ಕೆ ಕೋಚ್‌ ಆತನನ್ನು ಬೆನ್ನಟ್ಟಿದ್ದಾನೆ. ಅಷ್ಟೇ ಅಲ್ಲ ರಾಕೆಟ್‌ ನಿಂದ ಹೊಡೆದಿದ್ದು, ಈ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ.

ಘಟನೆ ವಿವರ: ಮಾಧೇಪುರ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದ್ದು, ಬ್ಯಾಡ್ಮಿಂಟನ್ ಆಟಗಾರರು ತಮ್ಮ ದಿನನಿತ್ಯದ ಅಭ್ಯಾಸವನ್ನು ಮುಗಿಸಿದ ನಂತರ ಹೊರಡಲು ಸಿದ್ದತೆ ನಡೆಸಿದ್ದರು. ಈ ವೇಳೆ ಆಗಮಿಸಿದ ಎಡಿಎಂ ಶಿಶಿರ್ ಕುಮಾರ್ ಮಿಶ್ರಾ ಇನ್ನಷ್ಟು ಹೊತ್ತು ಆಟ ಮುಂದುವರೆಸಲು ಹೇಳಿದ್ದಾರೆ. ಆದರೆ ಆಟಗಾರರು ಈಗಾಗಲೇ ದಣಿದಿದ್ದರಿಂದ ಸಾಧ್ಯವಾಗುವುದಿಲ್ಲ ಎಂದು ADM ಗೆ ನಯವಾಗಿ ಪ್ರತಿಕ್ರಿಯಿಸಿದ್ದಾರೆ.

ಇಷ್ಟಕ್ಕೇ ಅವರ ಪ್ರತಿಕ್ರಿಯೆಯಿಂದ ಕೋಪಗೊಂಡ ಮಿಶ್ರಾ, ಬ್ಯಾಡ್ಮಿಂಟನ್ ರಾಕೆಟ್‌ನಿಂದ ದೈಹಿಕವಾಗಿ ದಾಳಿ ಮಾಡಲು ಪ್ರಾರಂಭಿಸಿದ್ದು, ಆಗ ಆಟಗಾರ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಆದರೂ ಎಡಿಎಂ ಅವರನ್ನು ಬೆನ್ನಟ್ಟಿದರು ಎಂದು ಮತ್ತೊಬ್ಬ ಆಟಗಾರ ದೇವರಾಜ್ ವಿವರಿಸಿದ್ದಾರೆ. ಹಲ್ಲೆಯಿಂದ ಕುತ್ತಿಗೆ ಮತ್ತು ತಲೆಗೆ ಗಾಯಗಳಾಗಿದ್ದು, ಸದರ್ ಆಸ್ಪತ್ರೆಯಲ್ಲಿ ವೈದ್ಯಕೀಯ ಆರೈಕೆಯ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ADM ನ ನಿರಾಕರಣೆ: ಎಡಿಎಂ ಶಿಶಿರ್ ಕುಮಾರ್ ಮಿಶ್ರಾ ದೈಹಿಕ ಹಲ್ಲೆ ಆರೋಪಗಳನ್ನು ನಿರಾಕರಿಸಿದ್ದಾರೆ. ಆಟಗಾರರು ತಮ್ಮ ವಿರುದ್ಧ ಅಸಭ್ಯ ಭಾಷೆ ಬಳಸಿದ್ದಾರೆ, ಇದು ನನ್ನನ್ನು ಪ್ರಚೋದಿಸಿತು ಎಂದು ಅವರು ಹೇಳಿದ್ದಾರೆ. ಇದೀಗ ಹಿರಿಯ ಅಧಿಕಾರಿಗಳು ಪ್ರಕರಣದ ಕುರಿತು ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read