ಹಿರಿಯ ವ್ಯಕ್ತಿಯೊಬ್ಬರು ತಮ್ಮ ಮೊಮ್ಮಗನನ್ನು ಕರೆದುಕೊಂಡು ಸ್ಕೂಟರ್ ನಲ್ಲಿ ಮಾರುಕಟ್ಟೆಗೆ ಹೋಗುವಾಗ ಟ್ರಕ್ ಒಂದು ಡಿಕ್ಕಿ ಹೊಡೆದಿದ್ದು, ಇದರ ಪರಿಣಾಮ ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿದರೆ ಆರು ವರ್ಷದ ಬಾಲಕ ಟ್ರಕ್ ಮುಂಭಾಗ ಸಿಲುಕಿದರೂ ಚಾಲಕ ಕಿಲೋಮೀಟರ್ ದೂರದವರೆಗೆ ದೇಹವನ್ನು ಎಳೆದೊಯ್ದಿದ್ದಾನೆ.
ಇಂತಹದೊಂದು ಆಘಾತಕಾರಿ ಘಟನೆ ಶನಿವಾರದಂದು ಮಧ್ಯಪ್ರದೇಶದ ಮಹೋಬಾ ಜಿಲ್ಲೆಯ ಕಾನ್ಪುರ್ – ಸಾಗರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದ್ದು, ಮೃತಪಟ್ಟವರನ್ನು ಉದಿತ್ ನಾರಾಯಣ್ ಹಾಗೂ ಅವರ ಆರು ವರ್ಷದ ಮೊಮ್ಮಗ ಸಾತ್ವಿಕ್ ಎಂದು ಗುರುತಿಸಲಾಗಿದೆ.
ಅಪಘಾತ ನಡೆಯುತ್ತಿದ್ದಂತೆ ಸ್ಥಳೀಯರು ಟ್ರಕ್ ನಿಲ್ಲಿಸಲು ತಮ್ಮ ತಮ್ಮ ದ್ವಿಚಕ್ರ ವಾಹನಗಳಲ್ಲಿ ಬೆನ್ನಟ್ಟಿದ್ದು, ಆದರೂ ಕೂಡ ಚಾಲಕ ಇದಕ್ಕೆ ಕಿವಿಗೊಡದೆ ಟ್ರಕ್ ಚಲಾಯಿಸಿಕೊಂಡು ಹೋಗಿದ್ದಾನೆ. ಒಂದು ಕಿಲೋಮೀಟರ್ ದೂರ ಸಾಗಿದ ಬಳಿಕ ಕೊನೆಗೂ ಟ್ರಕ್ ನಿಲ್ಲಿಸಿದ್ದು, ಮುಂಭಾಗ ಸಿಲುಕಿಕೊಂಡಿದ್ದ ಬಾಲಕ ಅಷ್ಟರೊಳಗಾಗಿ ಮೃತಪಟ್ಟಿದ್ದ. ಭೀಕರ ಘಟನೆಯ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೋಡುಗರು ಬೆಚ್ಚಿಬಿದ್ದಿದ್ದಾರೆ.
https://twitter.com/MamtaTripathi80/status/1629717989556895744?ref_src=twsrc%5Etfw%7Ctwcamp%5Etweetembed%7Ctwterm%5E1629717989556895744%7
https://twitter.com/mahobapolice/status/1629534627575783424?ref_src=twsrc%5Etfw%7Ctwcamp%5Etweetembed%7Ctwterm%5E1629534627575783424%7Ctwgr%5E5dff2c6c90ce860c492e4e2507dbee73a29fa71a%7Ctwcon%5Es1_&ref_url=https%3A%2F%2Fwww.freepressjournal.in%2Findia%2Fman-6-year-old-grandson-on-scooter-die-after-being-dragged-by-truck-for-1-km-in-ups-mahoba-watch-shocking-video