ಮಧ್ಯರಾತ್ರಿ 3 ಗಂಟೆ ಸಮಯದಲ್ಲಿ ದಂಪತಿಯಿದ್ದ ಕಾರಿಗೆ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಬೈಕ್ ನಿಂದ ಡಿಕ್ಕಿ ಹೊಡೆದಿರೋ ಘಟನೆ ಬೆಂಗಳೂರಲ್ಲಿ ನಡೆದಿದೆ.
ಜನವರಿ 29 ರ ಭಾನುವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬೆಂಗಳೂರಿನ ಸರ್ಜಾಪುರದಲ್ಲಿ ದ್ವಿಚಕ್ರ ವಾಹನವೊಂದು ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದ ಘಟನೆಯ ವಿಡಿಯೋ ಟ್ವಿಟರ್‌ನಲ್ಲಿ ವೈರಲ್ ಆಗಿದೆ.
ಈಸ್ಟ್ ಬೆಂಗಳೂರಿನ ಸಿಟಿಜನ್ ಮೂವ್ ಮೆಂಟ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಬೈಕ್ ಸವಾರ ಸುಮಾರು 5 ಕಿಲೋಮೀಟರ್ ವರೆಗೆ ಕಾರನ್ನು ಚೇಸ್ ಮಾಡಿ ಕಾರಿನಲ್ಲಿದ್ದ ದಂಪತಿಯನ್ನು ಹೆದರಿಸುತ್ತಿರುವ ದೃಶ್ಯವಿದೆ.
ಉಪ ಪೊಲೀಸ್ ಆಯುಕ್ತ (ವೈಟ್‌ಫೀಲ್ಡ್) ಪ್ರಕಾರ, ಘಟನೆಯ ಸಮಯದಲ್ಲಿ ಎಸ್ ಗಿರೀಶ್, ಅಂಕಿತಾ ಜೈಸ್ವಾಲ್ ಮತ್ತು ಕುಶ್ ಜೈಸ್ವಾಲ್ ಅವರುಕಾರಿನಲ್ಲಿ ಸರ್ಜಾಪುರ ಮುಖ್ಯ ರಸ್ತೆಯಲ್ಲಿ ತಮ್ಮ ಅಪಾರ್ಟ್ಮೆಂಟ್ಗೆ ಹಿಂತಿರುಗುತ್ತಿದ್ದರು.
“ಇಂದು ಮುಂಜಾನೆ 3 ಗಂಟೆಯ ಸುಮಾರಿಗೆ ಸರ್ಜಾಪುರ ರಸ್ತೆಯ ಸೋಫಾಸ್ ಮತ್ತು ಮೋರ್ ಬಳಿ ಭಯಾನಕ ಘಟನೆ ವರದಿಯಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಗೆ ದುಷ್ಕರ್ಮಿಗಳು ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದ್ದಾರೆ. ಅವರು ಚಿಕ್ಕನಾಯಕನಹಳ್ಳಿಯವರೆಗೆ 5 ಕಿಮೀ ದೂರ ಕಾರನ್ನು ಹಿಂಬಾಲಿಸಿದ್ದಾರೆ. ರಾತ್ರಿಯಲ್ಲಿ ನಿಮ್ಮ ಕಾರನ್ನು ತೆರೆಯಬೇಡಿ. ಡ್ಯಾಶ್ ಕ್ಯಾಮ್ ಬಳಸಿ” ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ.
https://twitter.com/east_bengaluru/status/1619557338352078848?ref_src=twsrc%5Etfw%7Ctwcamp%5Etweetembed%7Ctwterm%5E1619557338352078848%7Ctwgr%5Eb9311deb95e868125f5a6ae1c26bdb1cb2025d3c%7Ctwcon%5Es1_&ref_url=https%3A%2F%2Fwww.india.com%2Fkarnataka%2Fbiker-collides-purposely-with-car-at-3am-in-bengaluru-sarjapur-main-road-chases-couple-inside-for-5km-shocking-video-surfaces-5875274%2F