ದಾವಣಗೆರೆ: ಕಳವು, ಅಸಭ್ಯ ವರ್ತನೆ ಆರೋಪದ ಮೇಲೆ ಅಪ್ರಾಪ್ತ ಬಾಲಕನೊಬ್ಬನಿಗೆ ಕಿಡಿಗೇಡಿ ಯುವಕರು ಅಡಿಕೆ ಮರಕ್ಕೆ ಕಟ್ಟಿ ಹಾಕಿ ಚಿತ್ರಹಿಂಸೆ ನೀಡಿದ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ನಲ್ಲೂರು ಸಮೀಪದ ಮುಸ್ತಾಫನಹಳ್ಳಿಯಲ್ಲಿ ನಡೆದಿದೆ.
ಹಕ್ಕಿ ಪಿಕ್ಕಿ ಸಮುದಾಯಕ್ಕೆ ಸೇರಿದ ಅಪ್ರಾಪ್ತ ಬಾಲಕನಿಗೆ ಅಡಿಕೆ ಮರಕ್ಕೆ ಕಟ್ಟಿ ಹಾಕಿ ಥಳಿಸಲಾಗಿದೆ. ಮರ್ಮಾಂಗಕ್ಕೆ ಕೆಂಪಿರುವೆ, ಗೊದ್ದಗಳನ್ನು ಬಿಟ್ಟು ವಿಕೃತಿ ಮೆರೆಯಲಾಗಿದೆ. ಮರಕ್ಕೆ ಹಿಮ್ಮುಖವಾಗಿ ಕೈಕಟ್ಟಿದ್ದ ಬಾಲಕನ ತಲೆ ಮೈಮೇಲೆ ಮತ್ತು ಗುಪ್ತಾಂಗಗಳಿಗೆ ಕೆಂಪಿರುವೆಗಳನ್ನು ಬಿಡಲಾಗಿದ್ದು, ನೋವಿನಿಂದ ಅಳುವುದನ್ನು ಮೊಬೈಲ್ನಲ್ಲಿ ಸೆರೆಹಿಡಿದು ವಿಕೃತ ವರ್ತನೆ ತೋರಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ದುಷ್ಕರ್ಮಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಹಕ್ಕಿ ಪಿಕ್ಕಿ ಸಮುದಾಯದ ಬಾಲಕನಿಗೆ ಆತನ ಸಂಬಂಧಿಕರು ಈ ರೀತಿ ಚಿತ್ರ ಹಿಂಸೆ ನೀಡಿದ್ದಾರೆ. ಬಾಲಕ ಗ್ರಾಮದಲ್ಲಿ ಸಣ್ಣಪುಟ್ಟ ಕಳ್ಳತನ ಮಾಡುತ್ತಿದ್ದ. ಮಹಿಳೆಯರು, ಮಕ್ಕಳ ಮುಂದೆ ಉದ್ದೇಶಪೂರ್ವಕವಾಗಿ ಜನನಾಗ ಪ್ರದರ್ಶಿಸಿ ಅಸಭ್ಯ ವರ್ತನೆ ತೋರುತ್ತಿದ್ದ. ಸೆಕ್ಸ್ ವೀಡಿಯೋ ನೋಡಿ ಸಾರ್ವಜನಿಕವಾಗಿ ಅಸಭ್ಯ ವರ್ತನೆ ತೋರಿ ಮುಜುಗರ ಉಂಟು ಮಾಡುತ್ತಿದ್ದ. ಇದರಿಂದ ರೋಸಿ ಹೋಗಿದ್ದ ಗ್ರಾಮದ ಕೆಲವು ಯುವಕರು ಈ ರೀತಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.