ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಇಲಕಲ್ಲ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕನಿಗೆ ಶಿಕ್ಷಕಿ ಚಪ್ಪಲಿಯಿಂದ ಹೊಡೆದ ಘಟನೆ ನಡೆದಿದೆ.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಾಟಕ ಮಾಡಿಸುವ ವಿಚಾರಕ್ಕೆ ಇಲಕಲ್ಲ ಉರ್ದು ಶಾಲೆಯ ಶಿಕ್ಷಕಿಯ ಅಮೀನಾ ತಮಗೆ ಶಾಲೆಯಲ್ಲಿ ಚಪ್ಪಲಿಯಿಂದ ಹೊಡೆದಿದ್ದಾರೆ ಎಂದು ಆರೋಪಿಸಿ ಶಿಕ್ಷಕ ಅಂದಾನಯ್ಯ ವಸ್ತ್ರದ ಇಲಕಲ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಶಾಲೆಯ ಕೆಲವು ವಿದ್ಯಾರ್ಥಿಗಳು ಆಗಸ್ಟ್ 15ರ ಕಾರ್ಯಕ್ರಮದಲ್ಲಿ ಶಿಕ್ಷಕ ಅಂದಾನಯ್ಯ ಅವರು ನಮಗೆ ಡ್ರಾಮಾ ಮಾಡಿಸುತ್ತಾರೆ ಎಂದು ಶಿಕ್ಷಕಿ ಅಮೀನಾ ಮುಂದೆ ಹೇಳಿದ್ದಾರೆ. ಆಗ ಡ್ರಾಮಾ ಮಾಡೋರಿಗೂ, ಮಾಡಿಸುವವರಿಗೂ ಚಪ್ಪಲಿ ತಗೊಂಡು ಹೊಡೆಯುತ್ತೇನೆ ಎಂದು ಶಿಕ್ಷಕಿ ಅಮೀನಾ ಹೇಳಿದ್ದಾರೆ.
ಈ ವಿಷಯ ತಿಳಿದ ಅಂದಾನಯ್ಯ ಅವರು ಆ ರೀತಿ ವಿದ್ಯಾರ್ಥಿಗಳ ಮುಂದೆ ಮಾತನಾಡಬೇಡಿ ಎಂದು ಹೇಳಲು ಹೋದಾಗ ಶಿಕ್ಷಕಿ ಚಪ್ಪಲಿಯಿಂದ ಹೊಡೆದಿದ್ದಾರೆ. ಇದರಿಂದ ಕೋಪಗೊಂಡ ಅಂದಾನಯ್ಯ ಶಿಕ್ಷಕಿ ಅಮೀನಾ ನಡೆ ಬಗ್ಗೆ ಆಕ್ಷೇಪಿಸಿ ಇಲಕಲ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.