ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನ ನೆಹರು ನಗರದಲ್ಲಿ ಮದ್ಯ ಸೇವನೆಗೆ ಹಣ ಕೊಡಲಿಲ್ಲವೆಂದು ಪುತ್ರನೇ ತಂದೆಯನ್ನು ಕೊಲೆ ಮಾಡಿದ್ದಾನೆ.
55 ವರ್ಷದ ಗಂಗಣ್ಣ ಕೊಲೆಯಾದವರು. ರಿಪೀಸ್ ಪಟ್ಟಿಯಿಂದ ಹೊಡೆದು ಪುತ್ರ ಸಂಜಯ್ ಕುಮಾರ್(25) ತಂದೆಯನ್ನು ಕೊಲೆ ಮಾಡಿದ್ದಾನೆ, ನಂತರ ಶವ ಸಂಸ್ಕಾರಕ್ಕೆ ಮುಂದಾಗಿದ್ದುಮ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ,
ಗೌರಿಬಿದನೂರು ಠಾಣೆ ಪೊಲೀಸರು ತಪಾಸಣೆಯ ವೇಳೆ ಪುತ್ರನೇ ಅಪ್ಪನನ್ನು ಕೊಂದಿದ್ದು ಕಂಡುಬಂದ ಹಿನ್ನೆಲೆಯಲ್ಲಿ ಆರೋಪಿ ಸಂಜಯ ಕುಮಾರ್ ಬಂಧಿಸಲಾಗಿದೆ. ಗೌರಿಬಿದನೂರು ಟೌನ್ ಪೋಲಿಸ್ ಠಾಣೆಯಲ್ಲಿ ಕೇಸು ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
