ಸಾಮಾಜಿಕ ಜಾಲತಾಣಗಳಲ್ಲಿ ತ್ವರಿತವಾಗಿ ಖ್ಯಾತಿ ಗಳಿಸಲು ಮತ್ತು ಫಾಲೋವರ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳಲು ಇಂಟರ್ನೆಟ್ ಬಳಕೆದಾರರು ಅಪಾಯಕಾರಿ ಸ್ಟಂಟ್ ಗಳನ್ನು ಮಾಡುತ್ತಿರುತ್ತಾರೆ. ಇದರ ಮುಂದುವರಿದ ಭಾಗವಾಗಿ ಪುಣೆಯಲ್ಲಿ ಸೆರೆಹಿಡಿಯಲಾದ ಅಪಾಯಕಾರಿ ಸ್ಟಂಟ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದಿದೆ. ವಿಡಿಯೋ ಜೀವಕ್ಕೆ ಅಪಾಯ ತರುವಂತಿದೆ.
ಪಾಳು ಬಿದ್ದ ಕಟ್ಟಡದ ಟೆರೇಸ್ ಮೇಲೆ ಯುವಕನೊಬ್ಬ ಕಟ್ಟಡದ ತುದಿಯಲ್ಲಿ ಮಲಗಿದ್ದು ತನ್ನ ಕೈಯನ್ನು ಕೆಳಗೆ ನೀಡಿದ್ದು ಅದನ್ನು ಯುವತಿಯೊಬ್ಬಳು ಹಿಡಿದು ನೇತಾಡುತ್ತಿದ್ದಾಳೆ. ತಮ್ಮ ತೋಳುಗಳ ಬಲವನ್ನು ಪರೀಕ್ಷಿಸಲು ಮತ್ತು ರೀಲ್ಸ್ ಕಂಟೆಂಟ್ ರಚಿಸಲು ಈ ರೀತಿ ಪ್ರಯತ್ನಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ವರದಿಗಳ ಪ್ರಕಾರ, ಪುಣೆಯ ಜಂಭುಲ್ವಾಡಿ ಪ್ರದೇಶದ ಸ್ವಾಮಿನಾರಾಯಣ ಮಂದಿರದ ಬಳಿಯ ಕಟ್ಟಡದ ಮೇಲೆ ಈ ಸಾಹಸವನ್ನು ಮಾಡಲಾಗಿದೆ.
https://twitter.com/mumbaislifeline/status/1803660981454926210?ref_src=twsrc%5Etfw%7Ctwcamp%5Etweetembed%7Ctwterm%5E1803660981454926210%7Ctwgr%5E