ಶಾಕಿಂಗ್ ನ್ಯೂಸ್ : ಪತ್ನಿಯನ್ನು ಕೊಂದು ಅವಳ ಮೆದುಳನ್ನೇ ತಿಂದ ಗಂಡ!

ಮೆಕ್ಸಿಕೋದಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದ್ದು, ಡ್ರಗ್ಸ್ ವ್ಯಸನಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಬಳಿಕ ಅವಳ ದೇವಹನ್ನು ತುಂಡು, ತುಂಡಾಗಿ ಕತ್ತರಿಸಿ ಮೆದುಳು ತಿಂದಿದ್ದಾನೆ.

ಮೆಕ್ಸಿಕೋದ ಪ್ಯೂಬ್ಲಾದಲ್ಲಿ ಘಟನೆ ನಡೆದಿದ್ದು, ಪತ್ನಿಯನ್ನು ಹತ್ಯೆ ಮಾಡಿ ನಂತರ ಮೃತದೇಹವನ್ನು ಪೀಸ್ ಪೀಸ್ ಮಾಡಿ ಬಳಿಕ ಮೆದುಳನ್ನು ತಿಂದಿರುವ ಆರೋಪದ ಮೇಲೆ ಜುಲೈ 2 ರಂದು ಅಲ್ವಾರೊ ಎಂದು ಗುರುತಿಸಲಾದ ಶಂಕಿತನನ್ನು ಅಧಿಕಾರಿಗಳು ಬಂಧಿಸಿದ್ದಾರೆ.

ನಿಷೇಧಿತ ವಸ್ತುವಿನ ಪ್ರಭಾವದಿಂದ ಜೂನ್ 29 ರಂದು ತನ್ನ ಪತ್ನಿ ಮಾರಿಯಾ ಮಾಂಟ್ಸೆರಾಟ್ ಅನಿಮಾಸ್ ಮೊಂಟಿಯೆಲ್ ಅವರನ್ನು ಹತ್ಯೆ ಮಾಡಿದ ಆರೋಪ 32 ವರ್ಷದ ವ್ಯಕ್ತಿ ಮೇಲಿದೆ. ಕೊಲೆಯ ನಂತರ ಶಂಕಿತನು ತನ್ನ ಹೆಂಡತಿಯ ದೇಹವನ್ನು ಛಿದ್ರಗೊಳಿಸಿ, ಅವಶೇಷಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಇಟ್ಟಿದ್ದಾನೆ. ಕೆಲವು ಚೀಲಗಳನ್ನು ಹತ್ತಿರದ ಕಂದಕದಲ್ಲಿ ಎಸೆಯಲಾಗಿದೆ ಎಂದು ವರದಿಯಾಗಿದೆ,

 ಮೆದುಳಿನ ಒಂದು ಭಾಗವನ್ನು ಟ್ಯಾಕೋಗಳಲ್ಲಿ ಸೇರಿಸುವ ಮೂಲಕ ಸೇವಿಸಿದ್ದೇನೆ ಮತ್ತು ಅವಳ ಛಿದ್ರಗೊಂಡ ತಲೆಬುರುಡೆಯ ಒಂದು ಭಾಗವನ್ನು ಆಸ್ಟ್ರೇ ಆಗಿ ಬಳಸಿದ್ದೇನೆ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ. ಆಘಾತಕಾರಿ ಸಂಗತಿಯೆಂದರೆ, ಘಟನೆ ನಡೆದ ಎರಡು ದಿನಗಳ ನಂತರ, ಅಲ್ವಾರೊ ತನ್ನ ಸಂಬಂಧಿಕರೊಬ್ಬರನ್ನು ಸಂಪರ್ಕಿಸಿ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read