Shocking News: ಮನೆಯಿಂದ ಹೊರ ಹೋಗಿದ್ದ ಮಹಿಳೆ ಶವವಾಗಿ ಪತ್ತೆ; ಕಾರಣ ಮಾತ್ರ ನಿಗೂಢ

ಧಾರವಾಡ: ಮನೆಯಿಂದ ಹೊರ ಹೋಗಿದ್ದ ಮಹಿಳೆ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.

ರೂಪಾ ಸವದತ್ತಿ ಮೃತ ಮಹಿಳೆ. ಕಿಲ್ಲಾ ಬಡಾವಣೆ ನಿವಾಸಿಯಾಗಿರುವ ರೂಪಾ ಸವದತ್ತಿ ಪ್ರತಿದಿನ ತಮ್ಮ ಕೆಲಸ ಮುಗಿಸಿ ದರ್ಗಾಕ್ಕೆ ಹೋಗಿ ಬರುತ್ತಿದ್ದರು. ರೂಪಾ ಕುಟುಂಬದಲ್ಲಾಗಲಿ, ಮನೆಯಲ್ಲಾಗಲಿ ಯಾವುದೇ ಸಮಸ್ಯೆಗಳೂ ಇರಲಿಲ್ಲ. ಎಂದಿನಂತೆ ಬೆಳಿಗ್ಗೆ ಮನೆ ಕೆಲಸ ಮುಗಿಸಿ ದರ್ಗಾಕ್ಕೆ ಹೋಗಿ ಮನೆಗೆ ಹಿಂತಿರುಗುತ್ತಿದ್ದ ಮಹಿಳೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು, ಹೊಲದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ದರ್ಗಾಕ್ಕೆ ಹೋದ ರೂಪಾ ಎಷ್ಟು ಹೊತ್ತಾದರೂ ಮನೆಗೆ ಬಾರದಿದ್ದಾಗ ಮಗ ಫೋನ್ ಮಾಡಿದ್ದಾನೆ. ಆದರೆ ಫೋನ್ ಸ್ವಿಚ್ಡ್ ಆಫ್ ಆಗಿದೆ. ಗಾಬರಿಗೊಂಡ ಮನೆಯವರು ದರ್ಗಾಕ್ಕೆ ಬಂದು ವಿಚಾರಿಸಿದ್ದಾರೆ. ಸಿಸಿ ಟಿವಿ ಕ್ಯಾಮರಾ ಪರಿಶೀಲಿಸಿದ್ದಾರೆ. ದರ್ಗಾದಿಂದ ಮಹಿಳೆ ಮನೆಗೆ ಹೋಗುತ್ತಿದ್ದ ದೃಶ್ಯ ಇದೆ. ಆದರೆ ಮಹಿಳೆ ಮನೆಗೆ ಬಂದಿಲ್ಲ.

ಕುಟುಂಬದವರು ಧಾರವಾಡ ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ನಡೆಸಿದಾಗ ರೂಪಾ ಸವದತ್ತಿ ಶವ ಧಾರವಾಡದ ಗೋವನಕೊಪ್ಪ ರಸ್ತೆಯ ಪಕ್ಕದ ಹೊಲದಲ್ಲಿ ಪತ್ತೆಯಾಗಿದೆ. ಕುಟುಂಬದಲ್ಲಿಯೂ ಯಾವುದೇ ಸಮಸ್ಯೆಯಿಲ್ಲದ ರೂಪಾ ಹತ್ಯೆಗೆ ಕಾರಣವೇನು? ಕೊಲೆಗಾರ ಯಾರು ಎಂಬುದೇ ಇನ್ನೂ ನಿಗೂಢವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read