SHOCKING : ಅನೈತಿಕ ಸಂಬಂಧ ಶಂಕೆ : ಕಲಬುರಗಿಯಲ್ಲಿ ಪತ್ನಿ , ಆಕೆಯ ಲವರ್’ನ ಕೊಂದು ಪೊಲೀಸರಿಗೆ ಶರಣಾದ ಪತಿ.!

ಕಲಬುರಗಿ : ರಾಜ್ಯದಲ್ಲಂತೂ ಇತ್ತೀಚೆಗೆ ಕೊಲೆ ಪ್ರಕರಣಗಳು ಹೆಚ್ಚುತ್ತಿದ್ದು, ಜನರ ನೆಮ್ಮದಿಯನ್ನೇ ಹಾಳು ಮಾಡುತ್ತಿದೆ. ಅದರಲ್ಲೂ ಪತಿ, ಪತ್ನಿಯರ ಜಗಳ ಕೊಲೆ ಹಂತಕ್ಕೆ ಹೋಗುತ್ತಿದೆ. ಅನೈತಿಕ ಸಂಬಂಧಕ್ಕೆ ಪ್ರತಿನಿತ್ಯ ಕೊಲೆ-ಭೀಭತ್ಸ್ಯ ಕೃತ್ಯಗಳು ನಡೆಯುತ್ತಿದೆ.

ಕಲಬುರಗಿಯಲ್ಲಿ ನಡೆದ ಘಟನೆ ಎಲ್ಲರನ್ನ ಬೆಚ್ಚಿ ಬೀಳಿಸಿದೆ. ಪತಿಯೋರ್ವ ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತಿ ಹಾಗೂ ಆಕೆಯ ಪ್ರಿಯಕರನನ್ನು ಕೊಂದು ಪೊಲೀಸ್ ಠಾಣೆಗೆ ಬಂದು ಪೊಲೀಸರಿಗೆ ಶರಣಾಗಿದ್ದಾನೆ.
ಹೌದು, ಅನೈತಿಕ ಸಂಬಂಧ ಶಂಕೆಯಿಂದ ಪತ್ನಿ, ಆಕೆಯ ಪ್ರಿಯಕರನನ್ನು ಪತಿಯ ಹತ್ಯೆ ಮಾಡಿದ ಘಟನೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಮಾದನಹಿಪ್ಪರಗಾ ಗ್ರಾಮದಲ್ಲಿ ಘಟನೆ ನಡೆದಿದೆ.

ಕೊಲೆಯಾದವರನ್ನಯ ಪ್ರಿಯಕರ ಕಾಜಪ್ಪ(22), ಪತ್ನಿ ಸೃಷ್ಟಿ(22) ಎಂದು ಗುರುತಿಸಲಾಗಿದೆ. ಅವರನ್ನು ಪತಿ ಶ್ರೀಮಂತ್ ಕೊಲೆ ಮಾಡಿದ್ದಾನೆ.

ಪತ್ನಿಯ ಜೊತೆಗೆ ಕಾಜಪ್ಪ ಇದ್ದುದನ್ನು ಕಂಡು ಕೆಂಡಕಾರಿದ ಶ್ರೀಮಂತ್ ಇಬ್ಬರನ್ನು ಕೊಂದು ಹಾಕಿದ್ದಾನೆ. ನಂತರ ಪೋಲಿಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಎರಡು ವರ್ಷಗಳ ಹಿಂದೆಯಷ್ಟೇ ಸೃಷ್ಟಿಯನ್ನು ಶ್ರೀಮಂತ್ ಮದುವೆಯಾಗಿದ್ದ. ಆದರೆ ಸೃಷ್ಟಿಪರ ಪುರುಷನ ಜೊತೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದಳು. ಘಟನೆ ನಡೆದ ಸ್ಥಳಕ್ಕೆ ಮಾದನಹಿಪ್ಪರಗಾ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read