ಹಾಸನ : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ ನಡೆದಿದ್ದು, ಮಾಂಗಲ್ಯ ಸರದ ಆಸೆಗೆ ಮಾವನ ಮಗಳನ್ನೇ ಕೊಂದು ಆರೋಪಿ ಆತ್ಮಹತ್ಯೆ ಮಾಡಿಕೊಂಡ ಘಟನ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಡಿಗ್ಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಶಕುಂತಲ (48) ಎಂದು ಗುರುತಿಸಲಾಗಿದೆ. ಶಿವಮೂರ್ತಿ (55) ಎಂಬಾತ ಈ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ಆರೋಪಿ.
ಶಕುಂತಳ ಅವರು 27 ವರ್ಷಗಳ ಹಿಂದೆ ಪಾಲಾಕ್ಷ ಎಂಬುವವರ ಜೊತೆ ವಿವಾಹ ಆಗಿದ್ದರು. ಆ.20 ರಂದು ಪಾಲಾಕ್ಷ ಮನೆಯಲ್ಲಿ ಇಲ್ಲದಿರುವುದನ್ನು ಗಮನಿಸಿದ ಶಿವಮೂರ್ತಿ ಶಕುಂತಳ ಮನೆಗೆ ಬಂದಿದ್ದಾನೆ. ಬರುವಾಗಲೇ ನಕಲಿ ಚಿನ್ನದ ಸರ ತಂದಿದ್ದ ಶಿವಮೂರ್ತಿ ಶಕುಂತಳರವರ ಕತ್ತು ಹಿಸುಕಿ ಕೊಲೆ ಮಾಡಿ ನಕಲಿ ಚಿನ್ನದ ಸರ ಹಾಕಿ ಒರಿಜಿನಲ್ ಎತ್ತಿಕೊಂಡು ಹೋಗಿದ್ದನು. ಪತಿ ಮನೆಗೆ ಬಂದಿದ್ದಾಗ ಪತ್ನಿ ನೆಲದ ಮೇಲೆ ಬಿದ್ದಿದ್ದರು.
ಶಕುಂತಳಾ ಸಹೋದರಿಯರು ಪಾಲಾಕ್ಷ ವಿರುದ್ಧ ಆರೋಪ ಮಾಡಿದ್ದರು. ಸ್ಥಳಕ್ಕೆ ಬಂದಿದ್ದ. ಶಿವಮೂರ್ತಿ ಇದು ಹೃದಯಾಘಾತ ಎಂದು ಬಿಂಬಿಸಿದ್ದನು. ಶಿವಮೂರ್ತಿ ನಡವಳಿಕೆ ಕಂಡು ಪೊಲೀಸರು ಕೂಡ ಅನುಮಾನಗೊಂಡಿದ್ದರು. ನಂತರ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಹೆದರಿ ಶಿವಮೂರ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಸಂಬಂಧ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.