ಬೆಂಗಳೂರು : ಬೆಂಗಳೂರಿನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಸಾಕು ಗಿಳಿ ರಕ್ಷಿಸಲು ಹೋದ ಯುವಕ ವಿದ್ಯುತ್ ಶಾಕ್ ಗೆ ಬಲಿಯಾದ ಘಟನೆ ನಡೆದಿದೆ.
ಮೃತ ಯುವಕನನ್ನ 31 ವರ್ಷದ ಅರುಣ್ ಕುಮಾರ್ ಎಂದು ಗುರುತಿಸಲಾಗಿದೆ. ಗಿರಿನಗರದ ಅಪಾರ್ಟ್ ಮೆಂಟ್ ಒಂದರಲ್ಲಿ ಈ ಘಟನೆ ನಡೆದಿದೆ. ವಿದ್ಯುತ್ ಶಾಕ್ ಗೆ ಒಳಗಾದ ಬಾಲಕನನ್ನ ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಆತ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಹೈಟೆನ್ಶನ್ ವೈರ್ ಇರುವ ಕಂಬದ ಮೇಲೆ ಸಾಕು ಗಿಳಿ ಕುಳಿತಿತ್ತು. ಈ ವೇಳೆ ಗಿಳಿಯನ್ನ ರಕ್ಷಣೆ ಮಾಡಲು ಯುವಕ ಮುಂದಾಗುತ್ತಾನೆ. ಸ್ಟೀಲ್ ಪೈಪ್ ಗೆ ಕಡ್ಡಿ ಹಾಕಿ ಅದನ್ನ ಓಡಿಸಲು ಅರುಣ್ ಮುಂದಾಗುತ್ತಾನೆ. ಕಾಂಪೌಂಡ್ ಮೇಲೆ ನಿಂತು ಗಿಳಿಯನ್ನ ಓಡಿಸಲು ಹೋಗುತ್ತಾರೆ. ಆದರೆ 65000 ಸಾವಿರ ಕೆವಿ ವಿದ್ಯುತ್ ಇರುವ ಹೈಟೆನ್ಶನ್ ವೈರ್ ಅರುಣ್ ಕುಮಾರ್ ಗೆ ತಗುಲುತ್ತದೆ. ಶಾಕ್ ನಿಂದ ಅರುಣ್ ಕೆಳಗೆ ಬೀಳುತ್ತಾರೆ. ಕೂಡಲೇ ಅವರನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತದೆ. ಆದರೆ ಅಷ್ಟರಲ್ಲೇ ಅರುಣ್ ಮೃತಪಡುತ್ತಾರೆ.ಗಿಳಿ ಬಹಳ ಬೆಲೆ ಬಾಳುವ ಅಪರೂಪದ ತಳಿ ಎಂದು ಹೇಳಲಾಗಿದೆ. ಅದನ್ನು ರಕ್ಷಿಸಲು ಹೋಗಿ ಅರುಣ್ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ಯುವಕ ಸಾವನ್ನಪ್ಪಿದ ಬಳಿಕ ಕೂಡ ಗಿಳಿ ವಿದ್ಯುತ್ ಕಂಬದಲ್ಲೇ ಕುಳಿತಿತ್ತು. ನಂತರ ಅರುಣ್ ಕುಟುಂಬದವರು ಗಿಳಿಯನ್ನಾದರೂ ಬದುಕಿಸಿ ಎಂದು ಮೆಸ್ಕಾಂಗೆ ಮನವಿ ಮಾಡಿದ್ದಾರೆ. ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
