ಬೆಂಗಳೂರು : ಬೆಂಗಳೂರಿನಲ್ಲಿ ಬೆಚ್ಚಿ ಬೀಳಿಸೋ ಘಟನೆ ನಡೆದಿದ್ದು, ಪತಿಯೋರ್ವ ಕಾಲಿನಿಂದ ಪತ್ನಿಯ ಕುತ್ತಿಗೆ ತುಳಿದು ಹತ್ಯೆ ಮಾಡಿದ ಭಯಾನಕ ಘಟನೆ ನಡೆದಿದೆ.
ಕೋಲಾರ ಮೂಲದ ದಂಪತಿಗಳು ಬೆಂಗಳೂರಿನಲ್ಲಿ ನೆಲೆಸಿದ್ದರು. ಬಿಇ ಮಾಡಿಕೊಂಡಿದ್ದ ದಂಪತಿಗಳು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಕೊಲೆಯಾದವರನ್ನ ಪದ್ಮಜಾ ಎಂದು ಗುರುತಿಸಲಾಗಿದೆ. ಪತಿ ಆರೋಪಿ ಹರೀಶ್ ಈ ಕೃತ್ಯ ಎಸಗಿದ್ದಾರೆ.
ದಂಪತಿಗಳು ಕೋಲಾರದ ಶ್ರೀನಿವಾಸಪುರ ಮೂಲದವರು ಎಂದು ತಿಳಿದು ಬಂದಿದೆ. ಶಾಪಿಂಗ್ ಗೆ ಹೋಗಿ ಬಂದ ಹೆಂಡತಿ ಜೊತೆ ಪತಿ ಹರೀಶ್ ಕಿರಿಕ್ ತೆಗೆದಿದ್ದಾನೆ. ಗಲಾಟೆ ತಾರಕಕ್ಕೇರಿ ಹೆಂಡತಿ ಮೇಲೆ ಗಂಡ ಹಲ್ಲೆ ನಡೆಸಿದ್ದಾನೆ. ಹೆಂಡತಿ ಕೆಳಗೆ ಬೀಳುತ್ತಿದ್ದಂತೆ ಕಾಲಿನಿಂದ ಪತ್ನಿಯ ಕುತ್ತಿಗೆ ತುಳಿದು ಕೊಲೆ ಮಾಡಿದ್ದಾನೆ. ಪತಿ ಹರೀಶ್ ಕೆಲವು ಸಮಯದಿಂದ ಕೆಲಸ ಬಿಟ್ಟು ಮನೆಯಲ್ಲಿದ್ದನು ಎನ್ನಲಾಗಿದೆ. ಪತ್ನಿ ಜೊತೆ ಹರೀಶ್ ಪ್ರತಿನಿತ್ಯ ಗಲಾಟೆ ಮಾಡುತ್ತಿದ್ದನು .
You Might Also Like
TAGGED:ಪತ್ನಿ ಮರ್ಡರ್