BREAKING : ರಾಜ್ಯದಲ್ಲಿ ಹೇಯ ಕೃತ್ಯ : 3 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿ ಅರೆಸ್ಟ್

ಮಂಡ್ಯ : ರಾಜ್ಯದಲ್ಲಿ ಹೇಯಕೃತ್ಯ ನಡೆದಿರುವ ಘಟನೆ ವರದಿಯಾಗಿದ್ದು, 3 ವರ್ಷದ ಕಂದಮ್ಮನ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ.

ಗ್ರಾಮವೊಂದರ ನಿವಾಸಿ ಶಿವಣ್ಣ (55) ಎಂಬಾತ ಪಕ್ಕದ ಮನೆಯ 3 ವರ್ಷದ ಮಗುವನ್ನು ತನ್ನ ಮನೆಯೊಳಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದು, ಮಗು ಅಳುತ್ತಿರುವ ಶಬ್ದ ಕೇಳಿದ ಸ್ಥಳೀಯರು ಮನೆಯ ಬಾಗಿಲು ಒಡೆದು ಮಗುವನ್ನು ರಕ್ಷಿಸಿದ್ದಾರೆ. ಜನರು ಮನೆ ಒಳಗೆ ನುಗ್ಗುತ್ತಿದ್ದಂತೆ ಕಾಮುಕ ಶಿವಣ್ಣ ಹಿಂದಿನ ಬಾಗಿಲಿನಿಂದ ಎಸ್ಕೇಪ್ ಆಗಿದ್ದಾನೆ.

ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು, ಪರಾರಿಯಾಗಿದ್ದ ಆರೋಪಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read