ಹಾಸನ: ಹಾಸನ ಜಿಲ್ಲೆ ಆಲೂರು ತಾಲೂಕಿನ ತೊಗರನಹಳ್ಳಿಯ ಸಮೀಪ ಹೆಜ್ಜೇನು ದಾಳಿಗೆ ರೈತ ಬಲಿಯಾಗಿದ್ದಾರೆ. 59 ವರ್ಷದ ರುದ್ರ ಶೆಟ್ಟಿ ಹೆಜ್ಜೆನು ದಾಳಿಯಿಂದ ಮೃತಪಟ್ಟ ರೈತ ಎಂದು ಗುರುತಿಸಲಾಗಿದೆ.
ಅವರು ಜಾನುವಾರುಗಳಿಗೆ ಮೇವು ತರಲು ಹೋಗಿದ್ದಾಗ ಹೆಜ್ಜೆನು ಹುಳಗಳು ದಾಳಿ ಮಾಡಿದೆ. ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.
