ನವದೆಹಲಿ: ಫ್ರೆಂಚ್ ಜ್ಯೋತಿಷಿ ನಾಸ್ಟ್ರಡಾಮಸ್ ಅವರ ಭವಿಷ್ಯವಾಣಿಗಳು ಎಂದಿಗೂ ಕುತೂಹಲ ಕೆರಳಿಸುತ್ತವೆ. ಶತಮಾನಗಳ ಹಿಂದೆಯೇ ಅನೇಕ ಐತಿಹಾಸಿಕ ಘಟನೆಗಳನ್ನು ಊಹಿಸಿದ್ದ ಇವರು, 2025ರ ಬಗ್ಗೆ ನೀಡಿರುವ ಭವಿಷ್ಯವಾಣಿಗಳು ಈಗ ಭಾರತ ಸೇರಿದಂತೆ ಜಗತ್ತಿನಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿವೆ.
ನೋಸ್ಟ್ರಡಾಮಸ್ ಅವರ ಪ್ರಖ್ಯಾತ ಕೃತಿ ‘ಲೆಸ್ ಪ್ರೊಫೆಟೀಸ್’ನಲ್ಲಿ 2025ರಲ್ಲಿ ಜಾಗತಿಕ ಮಟ್ಟದಲ್ಲಿ ದೊಡ್ಡ ಅಲ್ಲಕಲ್ಲೋಲ ಉಂಟಾಗಲಿದೆ ಎಂದು ಭವಿಷ್ಯ ನುಡಿಯಲಾಗಿದೆ. ಈ ವರ್ಷವು ಮಹತ್ವದ ತಿರುವನ್ನು ಪಡೆಯಲಿದ್ದು, ವ್ಯಾಪಕ ವಿನಾಶ, ಆರ್ಥಿಕ ಕುಸಿತ ಮತ್ತು ಮೂರನೇ ವಿಶ್ವ ಯುದ್ಧಕ್ಕೂ ಕಾರಣವಾಗಬಹುದು ಎಂದು ಅವರು ಹೇಳಿದ್ದಾರೆ. ಒಂದು ವೇಳೆ ಇದು ನಿಜವಾದಲ್ಲಿ, ಜಗತ್ತಿನ ಗಡಿಗಳು ಬದಲಾಗಬಹುದು ಮತ್ತು ಜಾಗತಿಕ ರಾಜಕೀಯ ಚಿತ್ರಣವೇ ತಲೆಕೆಳಗಾಗಬಹುದು.
ಆದರೆ, ನೋಸ್ಟ್ರಡಾಮಸ್ ಅವರ ಭವಿಷ್ಯವಾಣಿಯಲ್ಲಿ ಒಂದು ಆಶಾದಾಯಕ ಅಂಶವಿದೆ. ಜಗತ್ತಿನಲ್ಲಿ ವಿನಾಶದ ಛಾಯೆ ಆವರಿಸಿದ್ದರೂ, ಭಾರತದಿಂದ ಶಾಂತಿಯ ಸಂದೇಶ ಹೊತ್ತು ತರುವ ಪ್ರಭಾವಿ ನಾಯಕರೊಬ್ಬರು ಉದಯಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ನಾಯಕ ಜಾಗತಿಕ ಬಿಕ್ಕಟ್ಟನ್ನು ಶಾಂತಗೊಳಿಸುವಲ್ಲಿ ಮತ್ತು ವಿಶ್ವ ವೇದಿಕೆಯಲ್ಲಿ ಭಾರತದ ಸ್ಥಾನವನ್ನು ಉನ್ನತೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.
ನೋಸ್ಟ್ರಡಾಮಸ್ ಮಾತ್ರವಲ್ಲದೆ, ಬಾಬಾ ವಂಗಾ ಸೇರಿದಂತೆ ಅನೇಕ ದಾರ್ಶನಿಕರು 2025 ಮಹತ್ವದ ಬದಲಾವಣೆಗಳ ವರ್ಷವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಅವರ ಭವಿಷ್ಯವಾಣಿಗಳು ಸಂಘರ್ಷ, ಹವಾಮಾನ ವೈಪರೀತ್ಯ ಮತ್ತು ಹೊಸ ಜಾಗತಿಕ ವ್ಯವಸ್ಥೆಯ ಬಗ್ಗೆಯೂ ಬೆಳಕು ಚೆಲ್ಲುತ್ತವೆ.
ಇದಲ್ಲದೆ, ನೋಸ್ಟ್ರಡಾಮಸ್ ಅವರು 2025ರಲ್ಲಿ ತೀವ್ರವಾದ ಹವಾಮಾನ ಬದಲಾವಣೆಗಳಾಗಲಿವೆ ಎಂದು ಮುನ್ಸೂಚನೆ ನೀಡಿದ್ದಾರೆ. ಇದು ಇತಿಹಾಸದಲ್ಲೇ ಅತ್ಯಂತ ಬಿಸಿಯಾದ ವರ್ಷಗಳಲ್ಲಿ ಒಂದಾಗಲಿದ್ದು, ಸುಡುವ ಗಾಳಿ ಮತ್ತು ದೀರ್ಘಕಾಲದ ಶಾಖದ ಅಲೆಗಳು ಇರಲಿವೆ ಎಂದು ಅವರು ಹೇಳಿದ್ದಾರೆ. ಇದು ಭಾರತಕ್ಕೆ ಆತಂಕಕಾರಿ ವಿಷಯವಾಗಿದೆ. ಇತ್ತೀಚಿನ ಅಧ್ಯಯನಗಳ ಪ್ರಕಾರ, ಭಾರತದಲ್ಲಿ ಶಾಖದ ಅಲೆಗಳ ಅವಧಿ ದ್ವಿಗುಣಗೊಳ್ಳಬಹುದು, ಅಂದರೆ ಸಾಮಾನ್ಯ 5-6 ದಿನಗಳ ಬದಲು 10-12 ದಿನಗಳವರೆಗೆ ಇರಬಹುದು ಎಂದು ಎಚ್ಚರಿಸಲಾಗಿದೆ. ಯುರೋಪ್ ಕೂಡ ತೀವ್ರವಾದ ಶಾಖದ ಪರಿಣಾಮಗಳನ್ನು ಎದುರಿಸುವ ಸಾಧ್ಯತೆ ಇದೆ.