SHOCKING : ಎಣ್ಣೆ ಮತ್ತಿನಲ್ಲಿ ಕಂಬ ಏರಿ ವಿದ್ಯುತ್ ತಂತಿಗಳ ಮೇಲೆ ಮಲಗಿದ ಭೂಪ : ಆಘಾತಕಾರಿ ವಿಡಿಯೋ ವೈರಲ್ |WATCH VIDEO

ಮದ್ಯದ ಅಮಲಿನಲ್ಲಿ ವ್ಯಕ್ತಿಯೋರ್ವ ವಿದ್ಯುತ್ ಕಂಬ ಏರಿ ವಿದ್ಯುತ್ ತಂತಿಗಳ ಮೇಲೆ ಮಲಗಿದ್ದು, ಆಘಾತಕಾರಿ ವಿಡಿಯೋ ವೈರಲ್ ಆಗಿದೆ.

ಎಣ್ಣೆ ಹೊಡೆದ ಬಳಿಕ ಕಿಕ್ ಸಡನ್ ಆಗಿ ಇಳಿಯುವುದಿಲ್ಲ, ಹ್ಯಾಂಗೋವರ್ ಬಿಡುವುದಿಲ್ಲ. ಮನಸ್ಸು ಸರಿಯಾಗಿ ಕೆಲಸ ಮಾಡುವುದಿಲ್ಲ. ಆದ್ದರಿಂದ.. ಅವರು ಏನು ಮಾಡುತ್ತಿದ್ದಾರೆ ಎಂಬುದು ಅವರಿಗೆ ತಿಳಿದಿರಲ್ಲ.

ಆಂಧ್ರಪ್ರದೇಶದ ಮನ್ಯಂ ಜಿಲ್ಲೆ, ಪಾಲಕೊಂಡ ಮಂಡಲದ ಎಂ.ಸಿಂಗಿಪುರದಲ್ಲಿ ಓರ್ವ ಮದ್ಯಪ್ರಿಯ ಮಾಡಿದ ಕೆಲಸ ದೇಶಾದ್ಯಾಂತ ವೈರಲ್ ಆಗಿದೆ.

ಮದ್ಯದ ಮತ್ತಿನಲ್ಲಿ ಅವರು ವಿದ್ಯುತ್ ಕಂಬವನ್ನು ಏರಿದ್ದಾರೆ. ಎಷ್ಟು ಕೂಗಿದರೂ ಆತ ಗಮನಿಸಲಿಲ್ಲ. ಆತ ಎಲ್ಲಿ ಹೋಗಿ ವಿದ್ಯುತ್ ತಂತಿಗಳನ್ನು ಮುಟ್ಟುತ್ತಾನೋ ಎಂದು.. ಕೂಡಲೇ ಕೆಇಬಿ ಅಧಿಕಾರಿಗಳಿಗೆ ಕರೆ ಮಾಡಿ ಕರೆಂಟ್ ಕಟ್ ಮಾಡಿಸಿದ್ದಾರೆ .ಆತ ಕಂಬ ಏರಿ ಆರಾಮಾಗಿ ವಿದ್ಯುತ್ ತಂತಿಗಳ ಮೇಲೆ ಮಲಗಿದ್ದಾನೆ. ನಂತರ ಜನರು ಕಂಬ ಏರಿ ಆತನನ್ನು ಬಲವಂತವಾಗಿ ಕೆಳಗಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read