ಬಳ್ಳಾರಿ: ಬೈಕ್ ಗೆ ಸಾರಿಗೆ ಬಸ್ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಿರಗುಪ್ಪ ತಾಲೂಕಿನ ಕುಡುದರಹಾಳ ಸಮೀಪ ಸೋಮವಾರ ನಡೆದಿದೆ.
ಬೊಮ್ಮಲಾಪುರದ ನಾಗಭೂಷಣ್(35), ಸಂಧ್ಯಾ(32) ಮೃತಪಟ್ಟ ದಂಪತಿ. ಇಬ್ಬರೂ ಬೊಮ್ಮಲಾಪುರದಿಂದ ಬೈಕ್ ನಲ್ಲಿ ಸಿರಗುಪ್ಪಕ್ಕೆ ತೆರಳುತ್ತಿದ್ದಾಗ ಸಾರಿಗೆ ಬಸ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಬಸ್ ಹಿಂಬದಿಯ ಚಕ್ರಕ್ಕೆ ಸಿಲುಕಿದ ದಂಪತಿ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಚ್ಚೋಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.