ಬೆಂಗಳೂರು: ಹಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆಗೆ ಬೆಂಕಿ ಬಿದ್ದು ಮಗು ಸಾವನ್ನಪ್ಪಿದ ಘಟನೆ ಬೆಂಗಳೂರಿನ ಸ್ಯಾಂಕಿ ರಸ್ತೆಯ ಸಮ್ಮಿಟ್ ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ.
ನೇಪಾಳ ಮೂಲದ ದಂಪತಿಯ 18 ತಿಂಗಳ ಪುತ್ರಿ ಅನು ಮೃತಪಟ್ಟಿದ್ದಾಳೆ. ಪುಷ್ಕರ ಕುಮಾರ್, ಜ್ಯೋತಿ ಕುಮಾರಿ ದಂಪತಿಯ ಪುತ್ರಿಯಾಗಿರುವ ಅನು ಮೃತಪಟ್ಟಿದ್ದಾಳೆ. ಕಳೆದ 8 ವರ್ಷಗಳಿಂದ ದಂಪತಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಅಪಾರ್ಟ್ಮೆಂಟ್ ನಲ್ಲಿ 10*10 ಅಳತೆಯ ರೂಂನಲ್ಲಿ ವಾಸವಾಗಿದ್ದರು. ಮಗುವನ್ನು ಮನೆಯಲ್ಲಿ ಬಿಟ್ಟು ಪೋಷಕರು ಕೆಲಸಕ್ಕೆ ಹೋಗಿದ್ದರು. ಈ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿಕೊಂಡು ಮಗು ಸಾವನ್ನಪ್ಪಿದೆ. ಹೈ ಗ್ರೌಂಡ್ಸ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.