ಬೆಂಗಳೂರು: ಬೆಂಗಳೂರಿನಲ್ಲಿ ಫ್ರೀ ಫೈರ್ ಗೇಮ್ ಗೆ 14 ವರ್ಷದ ಬಾಲಕ ಅಮೋಘ ಕೀರ್ತಿ ಬಲಿಯಾಗಿದ್ದಾನೆ. ಬಾಲಕನ ಕೊಲೆ ಮಾಡಿ ಮಾವ ನಾಗಪ್ರಸಾದ್ ಸೋಲದೇವನಹಳ್ಳಿ ಠಾಣೆಗೆ ಶರಣಾಗಿದ್ದಾನೆ.
ಆನ್ಲೈನ್ ಗೇಮ್ ಚಟಕ್ಕೆ ಬಿದ್ದಿದ್ದ ಬಾಲಕ ಪದೇ ಪದೇ ಹಣ ಕೇಳುತ್ತಿದ್ದ ಎನ್ನಲಾಗಿದ್ದು, ಕೋಪದ ಭರದಲ್ಲಿ ಮಾವನೇ ಕೊಲೆ ಮಾಡಿದ್ದಾನೆ.
14 ವರ್ಷದ ಅಮೋಘ ಕೀರ್ತಿ ಕೊಲೆಯಾದ ಬಾಲಕ ಎಂದು ಹೇಳಲಾಗಿದೆ. ಎಂಟು ತಿಂಗಳಿನಿಂದ ಮಾವ ನಾಗಪ್ರಸಾದ್ ಜೊತೆಗೆ ವಾಸವಾಗಿದ್ದ ಬಾಲಕ ವಾಸವಾಗಿದ್ದ. ಫ್ರೀ ಫೈರ್ ಗೇಮ್ ಚಟಕ್ಕೆ ಬಿದ್ದಿದ್ದ. ಮಾವನಿಗೆ ಪದೇ ಪದೇ ಹಣ ಕೇಳುತ್ತಿದ್ದ. ಇದರಿಂದ ಕೋಪಗೊಂಡ ನಾಗಪ್ರಸಾದ್ ಸೋಮವಾರ ರಾತ್ರಿ ತಂಗಿ ಮಗನ ಕತ್ತು ಸೀಳಿ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ನಂತರ ಮೆಜೆಸ್ಟಿಕ್ ನಲ್ಲಿ 3ದಿನ ಕಾಲ ಕಳೆದಿದ್ದಾನೆ. ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಬೆಂಗಳೂರಿನ ವಾಯುವ್ಯ ವಿಭಾಗದ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆನ್ಲೈನ್ ಚಟಕ್ಕೆ ಬಿದ್ದು ಹಣಕ್ಕಾಗಿ ಪೀಡಿಸುತ್ತಿದ್ದ ತಂಗಿ ಮಗನ ಕಾಟ ಸಹಿಸಲಾರದೆ ನಾಗಪ್ರಸಾದ್ ಕೊಲೆ ಮಾಡಿದ್ದಾನೆ ಎನ್ನಲಾಗಿದ್ದು, ಪೊಲೀಸರು ಕ್ರಮ ಕೈಗೊಂಡಿದ್ದಾರೆ.