ಉಡುಪಿ: ಮನೆಯಲ್ಲಿ ಆಟವಾಡುವಾಗ ಕುತ್ತಿಗೆಗೆ ಬೆಲ್ಟ್ ಸುತ್ತಿಕೊಂಡ ಪರಿಣಾಮ ಬಾಲಕ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆ ತೆಂಕನಿಡಿಯೂರಿನಲ್ಲಿ ನಡೆದಿದೆ.
12 ವರ್ಷದ ರಾನ್ಸ್ ಕ್ಯಾತಲ್ ಡಿಸೋಜ ಮೃತಪಟ್ಟ ಬಾಲಕ. ಸೋಮವಾರ ರಾತ್ರಿ ಮನೆಯ ಕೋಣೆಯಲ್ಲಿ ಬೆಡ್ ಮೇಲೆ ಮಲಗಿದ್ದ ರಾನ್ಸ್ ಕ್ಯಾತಲ್ ಡಿಸೋಜ ಕುತ್ತಿಗೆಗೆ ಬೆಲ್ಟ್ ಸುತ್ತಿಕೊಂಡು ಬಾಯಿಯಿಂದ ಜೊಲ್ಲು ಹೊರ ಬಂದಿರುವುದನ್ನು ಆತನ ಅಕ್ಕ ಗಮನಿಸಿ ತಂದೆಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಬಾಲಕನನ್ನು ಮನೆಯ ಸಮೀಪದ ಕ್ಲಿನಿಕ್ ಗೆ ಕರೆದುಕೊಂಡು ಹೋಗಲಾಗಿದೆ. ಪರೀಕ್ಷಿಸಿದ ವೈದ್ಯರು ಪಲ್ಸ್ ಕಡಿಮೆ ಇದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹೇಳಿದ್ದಾರೆ. ಪೋಷಕರು ಬಾಲಕನನ್ನು ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಬಾಲಕ ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.