ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಸವಾರನನ್ನು ಆನೆಯೊಂದು ಎತ್ತಿ ಬಿಸಾಡಿ ಕೊಂದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಘಟನೆಯ ಭಯಾನಕ ವಿಡಿಯೋ ವೈರಲ್ ಆಗಿದೆ.
ಕೊಯಮತ್ತೂರಿನ ವಾಲ್ಪಾರೈನಲ್ಲಿ ದೈತ್ಯ ಆನೆಯೊಂದು ರಸ್ತೆ ದಾಟುತ್ತಿದ್ದಾಗ ಸ್ಥಳೀಯ ಅಧಿಕಾರಿಗಳು ವಾಹನ ಸಂಚಾರವನ್ನು ನಿಲ್ಲಿಸುವಂತೆ ಜನರನ್ನು ಕೇಳಿಕೊಂಡರು. ಆದರೆ ಜರ್ಮನ್ ಬೈಕ್ ಸವಾರನು ಕೇರ್ ಮಾಡದೇ ಮುಂದೆ ಬೈಕ್ ಚಲಾಯಿಸಿದ್ದಾನೆ. ಆನೆ ಬೈಕ್ ಸವಾರನನ್ನು ಎತ್ತಿ ಬಿಸಾಡಿದೆ. ಪರಿಣಾಮ ಆತ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.