ಬೆಂಗಳೂರು : ಪನ್ನೀರ್ ಬಳಿಕ ಕೋವಾದಲ್ಲೂ ಕಲಬೆರಕೆ ಅಂಶ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ವರದಿ ನೀಡಿದೆ.
ಸಿಹಿತಿಂಡಿಗಳಿಗೆ ಬಳಸುವ ಕೋವಾದಲ್ಲೂ ಕಲಬೆರಕೆಯಾಗಿದ್ದು, ಇದು ಅನ್ ಸೇಫ್ ಎಂದಿದೆ. ಕೋವಾದ ಕೆಲವು ಸ್ಯಾಂಪಲ್ಸ್ ಗಳನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಲ್ಯಾಬ್ ಗೆ ಕಳುಹಿಸಿದ್ದು, ಕೋವಾದಲ್ಲಿ ಕಲಬೆರಕೆ ಅಂಶವಿರುವುದು ಧೃಡವಾಗಿದೆ. ಕೋವಾ ತಯಾರಿಸಲು ಡಿಜರ್ಟೆಂಟ್, ಯೂರಿಯಾ ಬಳಸುತ್ತಿರುವುದು ಬಯಲಾಗಿದೆ.
ಅದೇ ರೀತಿ ವಾಟರ್ ಬಾಟಲ್ ಗಳಲ್ಲಿ ಶೇ.50 ರಷ್ಟು ಕೂಡ ಗುಣಮಟ್ಟವಿಲ್ಲ ಎಂದು ಆರೋಗ್ಯ ಇಲಾಖೆ ವರದಿ ನೀಡಿದೆ. ಈ ಸಂಬಂಧ ಸಚಿವ ದಿನೇಶ್ ಗುಂಡೂರಾವ್ ಇಂದು ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಲಿದ್ದಾರೆ.
TAGGED:ಕೋವಾದಲ್ಲೂ ಕಲಬೆರಕೆ ಅಂಶ