ಹಾಸನ: ಕುಡಿಯುವುದನ್ನು ಬಿಡು ಎಂದು ಬುದ್ಧಿ ಹೇಳಿದ್ದಕ್ಕೆ ಸ್ನೇಹಿತನನ್ನೇ ದುರುಳನೊಬ್ಬ ಕೊಲೆ ಮಾಡಿದ್ದಾನೆ. ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ರಾಂಪುರದಲ್ಲಿ ಘಟನೆ ನಡೆದಿದೆ.
ಗಿರೀಶ್(44) ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಬುದ್ದಿವಾದ ಹೇಳಿದ ಸ್ನೇಹಿತ ಗಿರೀಶ್ ನನ್ನು ಕಲ್ಲಿನಿಂದ ಹೊಡೆದು ರಮೇಶ್ ಕೊಲೆ ಮಾಡಿದ್ದಾನೆ. ನಿನ್ನೆ ಕೆಲಸ ಮುಗಿಸಿ ಅಂಗಡಿಯ ಬಳಿ ಗಿರೀಶ್ ಕುಳಿತುಕೊಂಡಿದ್ದ. ಅಲ್ಲಿಗೆ ಮದ್ಯ ಸೇವಿಸಿ ಬಂದಿದ್ದ ಆರೋಪಿ ರಮೇಶನಿಗೆ ಕುಡಿಯಬೇಡ ಎಂದು ಬುದ್ಧಿವಾದ ಹೇಳಿದ್ದ. ಇಷ್ಟಕ್ಕೆ ಸಿಟ್ಟಿಗೆದ್ದು ಕಲ್ಲಿನಿಂದ ಜಜ್ಜಿ ರಮೇಶ ಕೊಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಗಿರೀಶ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಅರಸೀಕೆರೆ ಗ್ರಾಮಾಂತರ ಠಾಣ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
