ಕಾರವಾರ: ಧರಿಸಲು ತೆಗೆದುಕೊಂಡ ಪ್ಯಾಂಟ್ ನಿಂದ ನಾಗರಹಾವು ಹೊರಬಂದು ಬಸುಗುಟ್ಟಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.
ಮಹಾಂತೇಶ ಎಂಬುವರ ಮನೆಯೊಳಗೆ ನೇತು ಹಾಕಿದ್ದ ಪ್ಯಾಂಟ್ ನಲ್ಲಿ ಹಾವು ಸೇರಿಕೊಂಡಿರುವುದು ಕಂಡು ಬಂದಿದೆ. ಶನಿವಾರ ಬೆಳಗ್ಗೆ ಮಹಾಂತೇಶ ಹೊರಗೆ ಹೋಗಲು ತಯಾರಾಗಿದ್ದು, ಗೋಡೆಗೆ ನೇತು ಹಾಕಿದ್ದ ಪ್ಯಾಂಟ್ ತೆಗೆದುಕೊಂಡು ಧರಿಸಲು ಮುಂದಾಗಿದಾಗ ಅದರಿಂದ ಹೊರಬಂದ ಹಾವು ಬುಸುಗುಟ್ಟಿದೆ. ಕೂಡಲೇ ದೂರಕ್ಕೆ ಪ್ಯಾಂಟ್ ಎಸೆದು ಮಹಾಂತೇಶ ಪಾರಾಗಿದ್ದಾರೆ. ನಂತರ ಉರಗ ತಜ್ಞ ಪ್ರಶಾಂತ ಉಲೇಕರ್ ಅವರನ್ನು ಕರೆಸಿ ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲಾಗಿದೆ.