SHOCKING: ವಾಹನಗಳ ಸಂಚಾರ ವೇಳೆಯಲ್ಲೇ ಹೆದ್ದಾರಿಗೆ ಅಪ್ಪಳಿಸಿ ಸ್ಪೋಟಗೊಂಡ ವಿಮಾನಕ್ಕೆ ಭಾರೀ ಬೆಂಕಿ | VIDEO VIRAL

ಇಟಲಿಯಲ್ಲಿ ಹೆದ್ದಾರಿಯಲ್ಲಿಯೇ ವಿಮಾನ ಅಪಘಾತಕ್ಕೀಡಾಗಿದೆ. ಇಬ್ಬರು ಸಾವು ಕಂಡಿದ್ದು, ಇಬ್ಬರು ಗಾಯಗೊಂಡ ಘಟನೆ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ.

ಉತ್ತರ ಇಟಲಿಯ ಬ್ರೆಸ್ಸಿಯಾ ಬಳಿಯ A21 ಕಾರ್ಡಮೊಲ್ಲೆ-ಆಸ್ಪಿಟೇಲ್ ಹೆದ್ದಾರಿಗೆ ಸಣ್ಣ ವಿಮಾನವೊಂದು ಅಪ್ಪಳಿಸಿದೆ. ಈ ಘಟನೆಯಲ್ಲಿ ವಿಮಾನದಲ್ಲಿದ್ದ ಇಬ್ಬರೂ ಸಾವನ್ನಪ್ಪಿದ್ದಾರೆ. ಇಬ್ಬರು ವಾಹನ ಸವಾರರು ಗಾಯಗೊಂಡಿದ್ದಾರೆ.

ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಹೆದ್ದಾರಿಗೆ ಅಪ್ಪಳಿಸಿ ಸ್ಫೋಟಗೊಂಡಿದೆ. ಅಪಘಾತದ ಪರಿಣಾಮವಾಗಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಇದೇ ವೇಳೆ ಹಾದುಹೋಗುತ್ತಿದ್ದ ಎರಡು ಕಾರ್ ಗಳಿಗೆ ಬೆಂಕಿ ತಗುಲಿದೆ.

75 ವರ್ಷದ ವಕೀಲ ಸೆರ್ಗಿಯೊ ರಾವಗಾಲಿಯಾ ಮತ್ತು 50 ವರ್ಷದ ಅನ್ನಾ ಮಾರಿಯಾ ಡಿ ಸ್ಟೆಫಾನೊ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಇಬ್ಬರೂ ತಕ್ಷಣವೇ ಸಾವನ್ನಪ್ಪಿದ್ದಾರೆ.

ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ, ಬೆಂಕಿಯನ್ನು ನಂದಿಸಿ ಪ್ರದೇಶವನ್ನು ಸುರಕ್ಷಿತಗೊಳಿಸಿದ್ದಾರೆ. ಪೊಲೀಸರು ಹೆದ್ದಾರಿಯ ಆ ಭಾಗದಲ್ಲಿ ಎರಡೂ ದಿಕ್ಕುಗಳಲ್ಲಿ ಸಂಚಾರವನ್ನು ನಿಲ್ಲಿಸಿದ್ದಾರೆ. ಇಟಾಲಿಯನ್ ವಾಯುಯಾನ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ವಿಮಾನ ಹೆದ್ದಾರಿಗೆ ಡಿಕ್ಕಿ ಹೊಡೆದು ಸ್ಫೋಟಗೊಂಡ ಕ್ಷಣ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read