SHOCKING : ಗೇಟ್ ಬಳಿ ಕಾದು ಕುಳಿತು ಗುಂಡು ಹಾರಿಸಿ ಉದ್ಯಮಿ ‘ಗೋಪಾಲ್ ಖೇಮ್ಕಾ’ ಹತ್ಯೆ : ಭಯಾನಕ ವೀಡಿಯೋ ವೈರಲ್ |WATCH VIDEO

ಬಿಹಾರ : ಉದ್ಯಮಿ ‘ಗೋಪಾಲ್ ಖೇಮ್ಕಾ’ ಹತ್ಯೆಯ ಭಯಾನಕ ವೀಡಿಯೋ ವೈರಲ್ ಆಗಿದೆ. ಗೋಪಾಲ್ ಖೇಮ್ಕಾ’ ಬರುವುದನ್ನೇ ಗೇಟ್ ಬಳಿ ಕಾದು ಕುಳಿತ ದುಷ್ಕರ್ಮಿ ಅವರು ಬರುತ್ತಿದ್ದಂತೆ ಗುಂಡು ಹಾರಿಸಿ ಎಸ್ಕೇಪ್ ಆಗಿದ್ದಾನೆ.

ಶುಕ್ರವಾರ ರಾತ್ರಿ ಬಿಜೆಪಿ ನಾಯಕ ಮತ್ತು ಉದ್ಯಮಿ ಗೋಪಾಲ್ ಖೇಮ್ಕಾ ಅವರನ್ನು ಪಾಟ್ನಾದ ಅವರ ನಿವಾಸದ ಹೊರಗೆ ಗುಂಡಿಕ್ಕಿ ಕೊಂದ ಕ್ಷಣ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕಪ್ಪು ಹೆಲ್ಮೆಟ್ ಮತ್ತು ನೀಲಿ ಶರ್ಟ್ ಧರಿಸಿದ ಬೈಕ್ನಲ್ಲಿ ಬಂದ ವ್ಯಕ್ತಿಯೊಬ್ಬ ಖೇಮ್ಕಾ ಅವರ ನಿವಾಸದ ಮುಖ್ಯ ದ್ವಾರದಲ್ಲಿ ಕಾಯುತ್ತಿರುವುದು ಕಂಡುಬಂದಿದೆ. ಉದ್ಯಮಿಯ ಕಾರು, ಪ್ರವೇಶದ್ವಾರಕ್ಕೆ ಬಂದು ನಿಂತಿದೆ. ಗೇಟ್ ಬಂದ್ ಆಗಿದ್ದರಿಂದ ದುಷ್ಕರ್ಮಿ ಅವಕಾಶವನ್ನು ಪಡೆದುಕೊಂಡು ಚಾಲಕನ ಸೀಟಿನಲ್ಲಿ ಕುಳಿತಿದ್ದ ಖೇಮ್ಕಾ ಮೇಲೆ ಗುಂಡು ಹಾರಿಸಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಖೇಮ್ಕಾ ಕಾರಿನ ಹಿಂದೆ ಇದ್ದ ಎರಡನೇ ಕಾರಿನ ಪುರುಷ ಮತ್ತು ಮಹಿಳೆ ಭಯಭೀತರಾಗಿ ತಮ್ಮ ವಾಹನದಿಂದ ಹೊರಬರುತ್ತಿರುವುದು ಕಂಡುಬಂದಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read