Shocking: ಕನಸಿನಲ್ಲಿ ಬಂದ ಸಂಗತಿ ನಂಬಿ ಸ್ವಂತ ಕಂದನನ್ನೇ ಕೊಂದ ತಾಯಿ…!

ಮೌಢ್ಯಕ್ಕೆ ಒಳಗಾಗಿದ್ದ ಮಹಿಳೆಯೊಬ್ಬಳು ಘೋರ ಕೃತ್ಯ ಎಸಗಿದ್ದಾಳೆ. ಕನಸಿನಲ್ಲಿ ಬಂದ ಸಂಗತಿ ನಂಬಿ ತನ್ನ ಸ್ವಂತ ಮಗುವನ್ನೇ ಹತ್ಯೆ ಮಾಡಿದ್ದಾಳೆ.

ರಾಜಸ್ಥಾನದ ಸಿಕಾರ್‌ನಲ್ಲಿ ನಡೆದ ನವಜಾತ ಶಿಶುವಿನ ಸಂಚಲನಕಾರಿ ಕೊಲೆ ಪ್ರಕರಣ ಈಗ ಬೆಳಕಿಗೆ ಬಂದಿದ್ದು, ತಾಯಿ ತನ್ನ 19 ದಿನದ ಮಗನನ್ನು ನೀರಿನ ಟ್ಯಾಂಕ್‌ನಲ್ಲಿ ಮುಳುಗಿಸಿ ಕೊಂದಿದ್ದಾರೆ. ಆರೋಪಿ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸಿಕಾರ್‌ನ ಜೀಲೋ ಗ್ರಾಮದ ನಾಯ್ ಬಸ್ತಿಯಲ್ಲಿ ಈ ಘಟನೆ ನಡೆದಿದೆ.

ಮೂಢನಂಬಿಕೆಯಿಂದ ತಾಯಿ ನವಜಾತ ಶಿಶುವನ್ನು ಕೊಂದಿದ್ದಾಳೆ ಎಂದು  ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ತಾಯಿ ಸರೋಜಳ ವರ್ತನೆಯಿಂದ ಆಕೆಯ ಮೇಲಿನ ನಮ್ಮ ಅನುಮಾನ ಇನ್ನಷ್ಟು ಹೆಚ್ಚಿದೆ ಎಂದು ಎಎಸ್ಪಿ ಗಿರ್ಧಾರಿ ಲಾಲ್ ಶರ್ಮಾ ಹೇಳಿದ್ದಾರೆ. ವಿಚಾರಣೆ ವೇಳೆ ಆಕೆ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ.

ಮಗುವನ್ನು ಏಕೆ ಕೊಂದಿದ್ದೀರಿ ಎಂದು ಪೊಲೀಸರು ಸರೋಜಳನ್ನು ಕೇಳಿದಾಗ, ‘ಮಂಗಳವಾರ ರಾತ್ರಿ ನಾನು ಮಗುವಿನೊಂದಿಗೆ ಮಲಗಿದ್ದೆ. ನನ್ನ ಕನಸಿನಲ್ಲಿ ಬಿಳಿ ಸೀರೆ ಉಟ್ಟ ಹೆಂಗಸು ಬಂದು ತನ್ನ ಮಗ ಚೆನ್ನಾಗಿಲ್ಲ ಎಂದಳು. ಅವನನ್ನು ಕೊಲ್ಲಬೇಕು ಎಂದು ಹೇಳಿ ಬಳಿಕ ಅವಳು ನಾಪತ್ತೆಯಾದಳು. ಇದರಿಂದ ಹೆದರಿ ಮಗುವನ್ನು ಎತ್ತಿಕೊಂಡು ಕೋಣೆಯ ಹೊರಗಿನ ನೀರಿನ ತೊಟ್ಟಿಯಲ್ಲಿ ಹಾಕಿ ಮತ್ತೆ ಬಂದು ಹಾಸಿಗೆಯ ಮೇಲೆ ಮಲಗಿದೆ ಎಂದಿದ್ದಾಳೆ.

ಬುಧವಾರ ನೀರಿನ ತೊಟ್ಟಿಯಲ್ಲಿ ಶವ ತೇಲುತ್ತಿರುವುದು ಪತ್ತೆಯಾಗಿತ್ತು. ಮಗುವಿನ ತಂದೆ ಕೃಷ್ಣ ಕುಮಾರ್ ರಾಜಸ್ಥಾನದ ರತನ್‌ಗಢದಲ್ಲಿ ಅಗ್ನಿಶಾಮಕ ದಳದಲ್ಲಿ ಕೆಲಸ ಮಾಡುತ್ತಿದ್ದಾರೆ. ಮೃತರು ತಮ್ಮ ಮೊದಲ ಮಗು, ಎಂಟು ವರ್ಷಗಳ ನಂತರ ಜನಿಸಿತ್ತು ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read