ಔಷಧಿ ಗುಣವನ್ನು ಹೊಂದಿರುವ ಶಿವಪ್ರಿಯ ಬಿಲ್ವಪತ್ರೆ

ಬಿಲ್ವಪತ್ರೆ ಹಿಂದೂಗಳಿಗೆ ಬಹಳ ಪವಿತ್ರವಾದದ್ದು. ಶಿವನ ಪೂಜೆಗೆ ಇದು ಬಹಳ ಮುಖ್ಯ. ಮಳೆಗಾಲದಲ್ಲಿ ಇದರ ಬೇಡಿಕೆ ಜಾಸ್ತಿ. ಶ್ರಾವಣ ಮಾಸದಲ್ಲಿ ಶಿವನ ಆರಾಧನೆಗೆ ಭಕ್ತರು ಬಿಲ್ವಪತ್ರೆಯನ್ನು ಬಳಸುತ್ತಾರೆ. ಶಿವ ಪ್ರಿಯ ಬಿಲ್ವಪತ್ರೆ ಔಷಧಿ ಗುಣವನ್ನು ಹೊಂದಿದೆ.

ಜ್ವರಕ್ಕೆ ಪ್ರಯೋಜನಕಾರಿ: ಆಯುರ್ವೇದದ ಪ್ರಕಾರ ಬಿಲ್ವಪತ್ರೆ ಎಲೆಗಳು ಸಾಮಾನ್ಯ ಶೀತ ಮತ್ತು ಜ್ವರಕ್ಕೆ ರಾಮಬಾಣ.

ಹೃದಯ ರೋಗ: ಬಿಲ್ವಪತ್ರೆಯ ಕಷಾಯ ಹೃದಯದ ಕಾರ್ಯಕ್ಷಮತೆ ಹೆಚ್ಚಿಸುತ್ತದೆ. ಅಲ್ಲದೆ ಇದರಿಂದ ಹೃದಯ ಸಂಬಂಧಿ ರೋಗಗಳ ಅಪಾಯ ಕಡಿಮೆ. ಹೃದಯ ಸಂಬಂಧಿ ಸಮಸ್ಯೆಯಿರುವವರು ಇದನ್ನು ಹೆಚ್ಚಾಗಿ ಬಳಸಬೇಕು

ಗುಳ್ಳೆ(ಹುಣ್ಣು)ಗಳಿಂದ  ವಿಶ್ರಾಂತಿ: ಕೆಲವೊಮ್ಮೆ ದೇಹದಲ್ಲಿನ ಉಷ್ಣಾಂಶ ಹೆಚ್ಚಾಗಿ ಬಾಯಿಯಲ್ಲಿ ಹುಣ್ಣು ಕಾಣಿಸಿಕೊಳ್ಳುತ್ತದೆ. ಈ ಹುಣ್ಣುಗಳಿಂದ ಪರಿಹಾರ ಪಡೆಯಲು ಬಿಲ್ಪತ್ರೆಯನ್ನು ಚೆನ್ನಾಗಿ ತೊಳೆದು ಅಗೆಯಿರಿ. ಒಂದೇ ದಿನದಲ್ಲಿ ನೋವು ನೀಡುವ ಹುಣ್ಣು ಮಾಯವಾಗುತ್ತದೆ.

ಮೂಲವ್ಯಾಧಿ: ಬಿಲ್ಪತ್ರೆಯ ಬಳ್ಳಿಯ ತಿರುಳನ್ನು ಕತ್ತರಿಸಿ, ಸಮಾನ ಪ್ರಮಾಣದ ಸಕ್ಕರೆ ಸೇರಿಸಿ ಪುಡಿ ಮಾಡಿ ಬೆಳಿಗ್ಗೆ ಮತ್ತು ಸಂಜೆ ತಣ್ಣೀರಿನೊಂದಿಗೆ ಸೇವಿಸಿ. ಇದು ಮೂಲವ್ಯಾದಿಗೆ ಒಳ್ಳೆ ಔಷಧಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read