ಕೊಪ್ಪಳ: ಬಿಜೆಪಿಯವರು ಬಡವರ ಮಕ್ಕಳನ್ನು ಪ್ರಚೋದಿಸಿ ಜಗಳ ಮಾಡಿಸುತ್ತಿದ್ದಾರೆ. ಮೊದಲು ಬಿಜೆಪಿಯವರನ್ನು ಗಡಿಪಾರು ಮಾಡಬೇಕು ಎಂದು ಸಚಿವ ಶಿವರಾಜ್ ತಂಗಡಗಿ ಕಿಡಿಕಾರಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ಪ್ರತಾಪ್ ಸಿಂಹ ಅಲ್ಲ, ಬಿಜೆಪಿಯವರನ್ನೇ ಗಡಿಪಾರು ಮಾಡಬೇಕು ಎಂದು ಕಿಡಿಕಾರಿದರು. ಬಿಜೆಪಿ ನಾಯಕರು ತಮ್ಮ ಮಕ್ಕಳನ್ನು ಕರೆತಂದು ಪ್ರತಿಭಟನೆ ಮಾಡಿಸುತ್ತಾರಾ? ಬಡವರ ಮಕ್ಕಳನ್ನು ಪ್ರಚೋದಿಸಿ ಜಗಳ ಮಾಡಿಸುತ್ತಾರೆ. ಕೊನೆಗೆ ಅನಾಹುತಕ್ಕೀಡಾಗುವುದು ಬಡ ಹಿಂದೂಗಳ ಮಕ್ಕಳು ಎಂದು ಗುಡುಗಿದರು.
ಬಿಜೆಪಿ ನಾಯಕರು ಪ್ರಚೋದನಕಾರಿ ಭಾಷಣ, ಹೇಳಿಕೆಗಳನ್ನು ನೀಡಿ ಬಡಮಕ್ಕಳಿಂದ ಪ್ರತಿಭಟನೆ ಮಾಡಿಸುತ್ತಿದ್ದಾರೆ. ಯಾವ ನಾಯಕರ ಮಕ್ಕಳು ಪ್ರತಿಭಟನೆ ಮಾಡುತ್ತಾರೆ? ಬಡಮಕ್ಕಳನ್ನು ಪ್ರಚೋದಿಸಿ ಗಲಾಟೆ ಮಾಡಿಸುವುದು. ಇದರಿಂದ ಹಿಂದೂಗಳ ಮಕ್ಕಳು ಅನಾಹುತಕ್ಕೀಡಾಗುತ್ತಿದ್ದಾರೆ. ಹೀಗಾಗಿ ಮೊದಲು ಬಿಜೆಪಿಯವರನ್ನು ಗಡಿಪಾರು ಮಾಡಬೇಕು ಎಂದರು.