BIG NEWS: ಶಿವಮೊಗ್ಗದ ಮುಗ್ಧ ನಾಗರಿಕರ ಪ್ರಶ್ನೆಗಳಿಗೆ ಉತ್ತರಿಸುವ ತಾಕತ್ತು ‘ಜಾತ್ಯಾತೀತ’ ಸಿದ್ದರಾಮಯ್ಯನವರಿಗಿದೆಯೇ? BJP ಪ್ರಶ್ನೆ


ಬೆಂಗಳೂರು: ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಪರಿಸ್ಥಿತಿ ಉದ್ವಿಗ್ನ ಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ಬಿಜೆಪಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

ಹಿಂದೂಗಳು ಇರುವ ಹಾಗಿಲ್ಲವಾ? ಹಿಂದೂಗಳಿಗೆ ರಕ್ಷಣೆ ಕೊಡುವುದಿಲ್ಲವೇ? ಶಿವಮೊಗ್ಗದ ಮುಗ್ಧ ನಾಗರಿಕರ ಪ್ರಶ್ನೆಗಳಿಗೆ ಉತ್ತರಿಸುವ ತಾಕತ್ತು ಜಾತ್ಯಾತೀತ ಸಿದ್ದರಾಮಯ್ಯನವರಿಗಿದೆಯೇ? ಎಂದು ರಾಜ್ಯ ಬಿಜೆಪಿ ಘಟಕ ಪ್ರಶ್ನಿಸಿದೆ.

ತಲ್ವಾರ್ ಮೆರವಣಿಗೆ ಸಮಾಜಕ್ಕೆ ಯಾವ ಸಂದೇಶವನ್ನು ನೀಡುತ್ತದೆ? ಇದಕ್ಕೆ ಅನುಮತಿ ನೀಡಿದ ಕಾಂಗ್ರೆಸ್ ಸರ್ಕಾರವೇ ಉತ್ತರಿಸಬೇಕು ಎಂದು ಹೇಳಿದೆ. ಹಿಂದೂಗಳನ್ನು ಮುಗಿಸುತ್ತೇವೆ ಎಂದು ಹೇಳಿದ ಜಿಹಾದಿ ಸಂಘಟನೆಗಳಿಗೆ ಬೆಂಬಲವಾಗಿ ಕಾಂಗ್ರೆಸ್ ಸರ್ಕಾರ ನಿಂತಿರುವುದಕ್ಕೆ ಬೇರೇನು ಸಾಕ್ಷಿ ಬೇಕು? ಎಂದು ಕೇಳಿದೆ.

ಗಣೇಶ ಚತುರ್ಥಿಯಲ್ಲಿ ಗಣೇಶನನ್ನು ಸ್ಥಾಪಿಸಲು ನೂರೆಂಟು ಅನುಮತಿ ಕೇಳುವ ಕೈ ಸರ್ಕಾರ ಸಮಾಜದ ಶಾಂತಿ ಕದಡುವ ಇಂತಹ ಮೆರವಣಿಗೆಗಳಿಗೆ ಅನುಮತಿ ನೀಡಿದ್ದರ ಹಿನ್ನಲೆ ಏನು? ಈ ಜಿಹಾದಿ ಸರ್ಕಾರದಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read