BIG NEWS: ಶಿವಮೊಗ್ಗ ಫ್ರೀಡಂ ಪಾರ್ಕಿಗೆ ‘ಅಲ್ಲಮಪ್ರಭು’ ಹೆಸರು; ಸಿಎಂ ಸಿದ್ದರಾಮಯ್ಯ ಘೋಷಣೆ

ಶಿವಮೊಗ್ಗ: ಅಲ್ಲಮಪ್ರಭು ಅವರಿಂದಲೇ 12ನೇ ಶತಮಾನದಲ್ಲಿಯೇ ಪ್ರಜಾಪ್ರಭುತ್ವ ಸ್ಥಾಪನೆ ಆಯಿತು. ಅಲ್ಲಮಪ್ರಭು ಶಿವಮೊಗ್ಗ ಜಿಲ್ಲೆಯವರು. ಹಾಗಾಗಿ ಇಲ್ಲಿನ ಫ್ರೀಡಂ ಪಾರ್ಕಿಗೆ ಅಲ್ಲಮಪ್ರಭು ಹೆಸರು ಇಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ ಮಾಡಿದ್ದಾರೆ.

ಶಿವಮೊಗ್ಗ ಫ್ರೀಡಂ ಪಾರ್ಕ್ ನಲ್ಲಿ ಸರ್ಕಾರದ 5ನೇ ಗ್ಯಾರಂಟಿ ಯೋಜನೆ ಯುವನಿಧಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅನುಭವ ಮಂಟಪದ ಅಧ್ಯಕ್ಷರಾಗಿ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಮೊದಲಿಗೆ ಈ ನೆಲದಲ್ಲಿ ಸ್ಥಾಪಿಸಿದ ಅಲ್ಲಮಪ್ರಭುವಿನ ಹೆಸರನ್ನು ಇಲ್ಲಿನ ಫ್ರೀಡಂ ಪಾರ್ಕ್ ಗೆ ಇಡುತ್ತೇವೆ ಎಂದುರು.

ಶಿವಮೊಗ್ಗ ಜಿಲ್ಲೆಯವರೇ ಆದ ಬಸವಾದಿ ಶರಣ ಅಲ್ಲಮ ಪ್ರಭುವಿಗೆ ಇದು ನಮ್ಮ ಕಾಂಗ್ರೆಸ್ ಸರ್ಕಾರ ಕೊಡುವ ಗೌರವ. 12ನೇ ಶತಮಾನದಲ್ಲಿಯೇ ಅನುಭವ ಮಂಟಪದ ಮೂಲಕ ದೇಶದ ಸಂಸತ್ ಭವನ,ವಿಧಾನಸಭೆ, ವಿಧಾನ ಪರಿಷತ್, ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ನೀಡಿದರು ಎಂದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read