ಆಸ್ಪತ್ರೆಯಲ್ಲಿ ಬಿಲ್ ಕಟ್ಟಲು ನಿಂತಿದ್ದ ಮಹಿಳೆ ಸರ ದೋಚಿದ ಕಳ್ಳಿ ಅರೆಸ್ಟ್

ಶಿವಮೊಗ್ಗ: ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರ ಚಿನ್ನದ ಸರ ದೋಚಿದ್ದ ಕಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜು. 19 ರಂದು ಮಧ್ಯಾಹ್ನ ಶಿವಮೊಗ್ಗ ಟೌನ್ ನ ವಾಸಿ 27  ವರ್ಷದ ಮಹಿಳೆಯೊಬ್ಬರು ಮೆಗ್ಗಾನ್ ಆಸ್ಪತ್ತೆಯ ಹೊರ ರೋಗಿಗಳ ರಶೀದಿ ನೀಡುವ ಸ್ಥಳದಲ್ಲಿ ಬಿಲ್ ಕಟ್ಟಲು ಸರದಿ ಸಾಲಿನಲ್ಲಿ ನಿಂತಿದ್ದ ಸಮಯದಲ್ಲಿ, ಅವರು ತಮ್ಮ ವ್ಯಾನಿಟಿ ಬ್ಯಾಗಿನಲ್ಲಿ ಇಟ್ಟುಕೊಂಡಿದ್ದ ಒಟ್ಟು 32 ಗ್ರಾಂ ತೂಕದ ಬಂಗಾರದ ಆಭರಣಗಳಿದ್ದ ಬಾಕ್ಸ್ ಕಳ್ಳತನ ಮಾಡಲಾಗಿದೆ.

ಸರ ಕಳೆದುಕೊಂಡ ಮಹಿಳೆ ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದಲ್ಲಿ ಕಳುವಾದ ಮಾಲು ಮತ್ತು ಆರೋಪಿತರ ಪತ್ತೆಗಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಜಿ.ಕೆ. ಮಿಥುನ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರಡ್ಡಿ ಆವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕ ಬಾಲರಾಜ್ ಬಿ. ಮೇಲ್ವಿಚಾರಣೆಯಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಅಂಜನ್ ಕುಮಾರ್ ಅವರ ನೇತೃತ್ವದಲ್ಲಿ, ಡಿ.ವೈ.ಎಸ್.ಪಿ.(ಪ್ರೋ) ಮಂಜುನಾಥ್, ಪೊಲೀಸ್ ಉಪನಿರೀಕ್ಷಕ ವಸಂತ್, ಪೊಲೀಸ್ ಉಪನಿರೀಕ್ಷಕಿ ಉಮಾ ಪಾಟೀಲ್, ಎಎಸ್ಐ ಚಂದ್ರಶೇಖರ್, ಸಿಬ್ಬಂದಿಗಳಾದ ಹೆಚ್.ಸಿ ಪಾಲಾಕ್ಷನಾಯ್ಕ್, ಲಚ್ಚಾನಾಯ್ಕ್ ಮತ್ತು ಪಿಸಿ ಚಂದ್ರನಾಯ್ಕ್, ಶಶಿಧರ್, ತ್ರೀವೇಣಿ ಅವರನ್ನು ಒಳಗೊಂಡ ತನಿಖಾ ತಂಡ ರಚಿಸಲಾಗಿತ್ತು.

ತನಿಖಾ ತಂಡವು ಜು. 22 ರಂದು ಪ್ರಕರಣದ ಆರೋಪಿತಳಾದ ಶಿವಮೊಗ್ಗ ಟಿಪ್ಪುನಗರ  ಗೌಸಿಯಾ ಸರ್ಕಲ್ ಹತ್ತಿರ ನಿವಾಸಿ ತಾಹಿರಾ ರೋಹಿ(30) ದಸ್ತಗಿರಿ ಮಾಡಿ,  ಅಂದಾಜು ಮೌಲ್ಯ 1,28,000 ರೂ. ಗಳ ಒಟ್ಟು 32 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಅಮಾನತ್ತುಪಡಿಸಿಕೊಂಡಿರುತ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read