ಹಾಸನ: ಮಳೆಯ ಅಬ್ಬರಕ್ಕೆ ಶಿರಾಡಿಘಾಟ್ ನಲ್ಲಿ ಮತ್ತೆ ಭೂಕುಸಿತ ಸಂಭವಿಸಿದ್ದು, ವಾಹನ ಸವಾರರು ಆತಂಕದಲ್ಲಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೋಣಿಗಾಲ್ ಬಳಿ ಶಿರಾಡಿಘಾಟ್ ನಲ್ಲಿ ಗುಡ್ದ ಕುಸಿದಿದೆ. ಚತುಷ್ಪಥ ರಸ್ತೆಗಾಗಿ ರಸ್ತೆಯ ಎರಡೂ ಬದಿಗಳಲ್ಲಿ 90 ಡಿಗ್ರಿ ಮಾದರಿಯಲ್ಲಿ ನೂರು ಅಡಿಗಳಷ್ಟು ಬಗೆಯಲಾಗಿದೆ. ಸಕಲೇಶಪುರದಾದ್ಯಂತ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಪರಿಣಾಮ ಶಿರಾಡಿಘಾಟನ ಈ ಭಾಗದಲ್ಲಿ ಮಣ್ಣು ಕುಸಿತವಾಗಿದೆ. ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಈ ಘಟನೆ ನಡೆದಿದೆ.
ತಡೆಗೋಡೆ ನಿರ್ಮಾಣ ಮಾಡಿದರ್ ಮೆಲ್ಭಾಗದಲ್ಲಿ ಮಣಿ ಕುಸಿಯುತ್ತಿದ್ದು, ಮರಗಳು, ಮಣ್ಣು, ಕಲ್ಲುಗಳ ಸಮೇತ ಕುಸಿದು ಬಿದ್ದಿವೆ. ಬಿರುಗಾಳಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು, ವಾಹನ ಸವಾರರು ಆತಂಕದಲ್ಲಿಯೇ ಸಂಚಾರ ನಡೆಸಿದ್ದಾರೆ.