ಅಷ್ಗಾಬಾತ್(ತುರ್ಕಮೇನಿಸ್ತಾನ): ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಅನೇಕ ಬಾರಿ ಮುಖಭಂಗ ಅನುಭವಿಸಿರುವ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಮತ್ತೊಮ್ಮೆ ಅಂತಹ ಪರಿಸ್ಥಿತಿ ಎದುರಿಸಿ ಮುಜುಗರಕ್ಕೆ ಒಳಗಾಗಿದ್ದಾರೆ.
ತುರ್ಕಮೇನಿಸ್ತಾನದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ಭೇಟಿ ಮಾಡಲು ಸುಮಾರು 40 ನಿಮಿಷ ಕಾದಿದ್ದಾರೆ. ಅಷ್ಟಾದರೂ ಪುಟಿನ್ ಸಿಗದಿದ್ದಾಗ ರಷ್ಯಾ ಮತ್ತು ಟರ್ಕಿ ಅಧ್ಯಕ್ಷರ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯುತ್ತಿದ್ದ ರೂಂಗೇ ನುಗ್ಗಿ ಬಿಟ್ಟಿದ್ದಾರೆ. ಶರೀಫ್ ಅವರ ಪರದಾಟ ನಗೆಪಾಟಲಿಗೀಡಾಗಿದ್ದು ವಿಡಿಯೋ ವೈರಲ್ ಆಗಿದೆ.
ತುರ್ಕಮೇನಿಸ್ತಾನದಲ್ಲಿ ಅಂತರಾಷ್ಟ್ರೀಯ ಮಟ್ಟದ ಸಭೆ ನಿಗದಿಯಾಗಿತ್ತು. ಪುಟಿನ್ ಅವರನ್ನು ಭೇಟಿಯಾಗಲು ಶರೀಫ್ ಸುಮಾರು 40 ನಿಮಿಷ ಕಾದಿದ್ದಾರೆ. ಪುಟಿನ್ ಸಿಗದಿದ್ದಾಗ ಸಭೆ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಿ ಕೆಲವೇ ಕ್ಷಣದಲ್ಲಿ ಅಲ್ಲಿಂದ ವಾಪಸ್ ಆಗಿದ್ದಾರೆ.
