ಸಹೋದ್ಯೋಗಿಯ ಮಗುವನ್ನು ಅಕ್ಷರ ಲೋಕಕ್ಕೆ ಪರಿಚಯಿಸಿದ ಶಶಿ ತರೂರ್‌

ತಮ್ಮ ಮನೋಬೌದ್ಧಿಕ ಸಾಮರ್ಥ್ಯದಿಂದ ದೇಶವಾಸಿಗಳ ಬಾಯಲ್ಲಿ ’ಅಬ್ಬಬ್ಬಾ’ ಎನಿಸುವಂತೆ ಮಾಡುವ ಮಾಜಿ ಸಚಿವ ಶಶಿ ತರೂರ್‌ ಬಳಿ ತಮ್ಮ ಮಕ್ಕಳಿಗೆ ಮೊದಲ ಅಕ್ಷರಾಭ್ಯಾಸ ಮಾಡಿಸಿ, ಅವರಿಂದ ಆಶೀರ್ವಾದ ಪಡೆಯಲು ಅನೇಕರು ಬರುತ್ತಾರೆ.

ಇದೀಗ ಅವರ ಸಹೋದ್ಯೋಗಿಯೊಬ್ಬರ ಮಗನಿಗೆ ವಿದ್ಯಾರಂಭದ ಸಂಪ್ರದಾಯ ನೆರವೇರಿಸಿಕೊಟ್ಟಿದ್ದಾರೆ ಶಶಿ ತರೂರ್‌. ಎರಡೂವರೆ ವರ್ಷದ ಮಗುವಿಗೆ ಅಕ್ಕಿ ತುಂಬಿದ ತಟ್ಟೆಯಲ್ಲಿ ಮೊದಲ ಅಕ್ಷರಗಳನ್ನು ಬರೆಯಲು ಹೇಳಿಕೊಟ್ಟ ಶಶಿ ತರೂರ್‌ ಈ ಸಂದರ್ಭದ ಚಿತ್ರಗಳನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದಾರೆ.

“ತಿರುವನಂತಪುರಂನಲ್ಲಿರುವ ನನ್ನ ಸಹೋದ್ಯೋಗಿ ಪ್ರಕಾಶ್ ತಮ್ಮ ಎರಡೂವರೆ ವರ್ಷದ ಮಗ ಅನಂತ ಪದ್ಮನಾಭನ್‌ನನ್ನು ನನ್ನ ಬಳಿ ಅಕ್ಷರಾಭ್ಯಾಸಕ್ಕೆ ಪರಿಚಯಿಸಲೆಂದು ಕರೆತಂದಿದ್ದರು. ವಾರ್ಷಿಕ ವಿದ್ಯಾರಂಭದ ದಿನದಂದು ಸಾಮಾನ್ಯವಾಗಿ ಈ ಸಂಪ್ರದಾಯ ನಡೆಯುತ್ತದೆ. ನಾನು ಬಹಳ ಸಂತಸದಿಂದ ’ಓ ಶ್ರೀ ಹರಿ’ ಎಂದು ಮಲಯಾಳಂ, ಸಂಸ್ಕೃತ ಹಾಗೂ ಇಂಗ್ಲಿಷ್‌ನಲ್ಲಿ, ಅಕ್ಕಿ ಕಾಳುಗಳ ಮೇಲೆ ಬರೆಯಿಸಿದೆ. ಆತ ಅದನ್ನು ಎಂಜಾಯ್ ಮಾಡಿದಂತೆ ಕಂಡ !” ಎಂದು ತರೂರ್‌ ಈ ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ.

https://twitter.com/ShashiTharoor/status/1660229109182763010?ref_src=twsrc%5Etfw%7Ctwcamp%5Etweetembed%7Ctwterm%5E16602291091

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read