ಉದ್ಯಮಿ ರಕ್ಷಿತಾ ರೆಡ್ಡಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಶರ್ವಾನಂದ್

ತೆಲುಗು ನಟ ಶರ್ವಾನಂದ್ ಉದ್ಯಮಿ ರಕ್ಷಿತಾ ರೆಡ್ಡಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೂನ್ 3 ರಂದು ಶರ್ವಾನಂದ್ ಮತ್ತು ರಕ್ಷಿತಾ ರೆಡ್ಡಿ ನಿಕಟ ಸ್ನೇಹಿತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಜೈಪುರದ ಲೀಲಾ ಪ್ಯಾಲೇಸ್‌ನಲ್ಲಿ ಮದುವೆಯಾಗಿದ್ದಾರೆ.

ಶರ್ವಾನಂದ್ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮದುವೆಯ ಫೋಟೋಗಳನ್ನು ಫ್ಯಾನ್ಸ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. ಚಿತ್ರವೊಂದರಲ್ಲಿ ರಾಮ್ ಚರಣ್ ಮದುವೆಗೆ ಹಾಜರಾಗಿರೋದು ಗೊತ್ತಾಗಿದೆ.

ಮದುವೆಯಲ್ಲಿ ರಾಮ್ ಚರಣ್ ಸೇರಿದಂತೆ ಸಿದ್ಧಾರ್ಥ್, ಅದಿತಿ ರಾವ್ ಹೈದರಿ, ನಿರ್ಮಾಪಕ ವಂಶಿ ಮತ್ತು ಹಲವಾರು ರಾಜಕಾರಣಿಗಳು ಭಾಗವಹಿಸಿದ್ದರು.

ಶರ್ವಾನಂದ್ ಮತ್ತು ರಕ್ಷಿತಾ ರೆಡ್ಡಿ ಈ ವರ್ಷ ಜನವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ರಕ್ಷಿತಾ ಐಟಿ ಉದ್ಯೋಗಿ ಮತ್ತು ತೆಲುಗು ದೇಶಂ ಪಕ್ಷದ ರಾಜಕಾರಣಿ ಬೊಜ್ಜಲ ಗೋಪಾಲ ಕೃಷ್ಣಾ ರೆಡ್ಡಿ ಅವರ ಮೊಮ್ಮಗಳು.

Sharwanand's pre-wedding celebrations begin, see video from haldi ceremony | Entertainment News,The Indian Express

Sharwanand and Rakshitha Reddy tie the knot; Ram Charan in attendance. See pics from wedding | Entertainment News,The Indian Express

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read